ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಒಡೆತನದ ವಿಡಿಯೋ-ಸ್ಟ್ರೀಮಿಂಗ್ ದೈತ್ಯ ಯೂಟ್ಯೂಬ್ ಟಿವಿ ಹೊಸ ಆ್ಯಡ್ ಆನ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಇದು 4ಕೆ ಗುಣಮಟ್ಟ, ಡೌನ್‌ಲೋಡ್‌ಗಳು ಮತ್ತು ಅನಿಯಮಿತ ಸ್ಟ್ರೀಮಿಂಗ್ ಅನ್ನು ಹೊಂದಿದ್ದು ಹೋಂ ನೆಟ್‌ವರ್ಕ್(ವೈ-ಫೈ)ನಲ್ಲಿ ಗೂಗಲ್ ಲೈವ್ ಟಿವಿ ನೋಡುವ ಸೇವೆಯನ್ನು ಪರಿಚಯಿಸುತ್ತದೆ.
YouTube ಟಿವಿ 4ಕೆ+: ಚಂದಾದಾರರಿಗೆ ವೈಫೈನಲ್ಲಿ Live TV ನೋಡುವ ಅವಕಾಶ! - ಗೂಗಲ್ ಒಡೆತನದ ವಿಡಿಯೋ-ಸ್ಟ್ರೀಮಿಂಗ್ ದೈತ್ಯ ಯೂಟ್ಯೂಬ್
ಯೂಟ್ಯೂಬ್ ಟಿವಿ ಹೊಸ ಆ್ಯಡ್ ಆನ್ ತಂತ್ರಜ್ಞಾನ ಪರಿಚಯಿಸುತ್ತಿದ್ದು, ಇದಕ್ಕೆ ತಿಂಗಳಿಗೆ 19.99 ಡಾಲರ್ ಹೆಚ್ಚುವರಿ ವೆಚ್ಚವಾಗುತ್ತದೆ. ಆ್ಯಡ್ ಆನ್ ಬಳಕೆದಾರರು ತಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಆಫ್ಲೈನ್ನಲ್ಲಿ ವೀಕ್ಷಿಸಲು ರೆಕಾರ್ಡ್ ಮಾಡಿದ ಶೋಗಳನ್ನು ಡೌನ್‌ಲೋಡ್ ಮಾಡಲು ಅವಕಾಶ ಇರುತ್ತದೆ.
4ಕೆ+ ಆ್ಯಡ್ ಆನ್ಗೆ ತಿಂಗಳಿಗೆ 19.99 ಡಾಲರ್ ಹೆಚ್ಚುವರಿ ವೆಚ್ಚವಾಗುತ್ತದೆ. ವೀಕ್ಷಕರಿಗೆ ಮೊದಲ ಬಾರಿಗೆ ಯೂಟ್ಯೂಬ್ ಟಿವಿಯಲ್ಲಿ 4ಕೆ ತಂತ್ರಜ್ಞಾನವನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. ಆ್ಯಪಲ್ ಟಿವಿ 4ಕೆ ನಂತಹ ಟಿವಿ ಮತ್ತು ಸ್ಟ್ರೀಮಿಂಗ್ ಸಾಧನವನ್ನು ಈಗಾಗಲೇ ಹೊಂದಿದೆ ಎನ್ನಲಾಗಿದೆ.
ಇದಲ್ಲದೇ, ಆ್ಯಡ್ ಆನ್ ಬಳಕೆದಾರರು ತಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಆಫ್ಲೈನ್ನಲ್ಲಿ ವೀಕ್ಷಿಸಲು ರೆಕಾರ್ಡ್ ಮಾಡಿದ ಶೋಗಳನ್ನು ಡೌನ್‌ಲೋಡ್ ಮಾಡಲು ಅವಕಾಶವಿರುತ್ತದೆ. ಇನ್ನು ಬಳಕೆದಾರರ ಮನೆಯ ವೈ-ಫೈ ನೆಟ್‌ವರ್ಕ್‌ನಲ್ಲಿ ಅನಿಯಮಿತ ಸ್ಟ್ರೀಮಿಂಗ್ ಅನ್ನು ನೋಡಬಹುದು. ಎಲ್ಲಾ ಯೂಟ್ಯೂಬ್ ಟಿವಿ ಬಳಕೆದಾರರಿಗಾಗಿ ಕಂಪನಿಯು ಡಾಲ್ಬಿ 5.1 ಆಡಿಯೊ ಸಾಮರ್ಥ್ಯಗಳನ್ನು ಸೇರಿಸುತ್ತಿದೆ.