ಹೈದರಾಬಾದ್: ಟಿಕ್‌ಟಾಕ್ ಆ್ಯಪ್ ಬ್ಯಾನ್ ಬೆನ್ನಲ್ಲೇ ಮೇಡ್ ಇನ್ ಇಂಡಿಯಾದ 'ಯೂಸೆ' ಶಾರ್ಟ್ ವಿಡಿಯೋ ಆ್ಯಪ್ವೊಂದನ್ನು ಅಭಿವೃದ್ಧಿಪಡಿಸಲಾಗಿದೆ.
ಟಿಕ್ಟಾಕ್ ಬ್ಯಾನ್ ನಂತರ ಗ್ರಾಹಕ ಬಳಕೆಗೆ ಬಂತು 'YouSay' ಶಾರ್ಟ್ ವಿಡಿಯೋ ಆ್ಯಪ್ - YOUSAY
ಹೈದರಾಬಾದ್ ಮೂಲದ ಕೇಟ್ರಿ ಕಂಪ್ಯೂಟರ್ ಸೊಲ್ಯೂಷನ್ಸ್ ಎಂಬ ಸಂಸ್ಥೆ ಮೇಡ್ ಇನ್ ಇಂಡಿಯಾದ 'ಯೂಸೆ' ಶಾರ್ಟ್ ವಿಡಿಯೋ ಆ್ಯಪ್ ಆ್ಯಪ್ ಅನ್ನು ಜಾರಿಗೆ ತಂದಿದೆ.
![ಟಿಕ್ಟಾಕ್ ಬ್ಯಾನ್ ನಂತರ ಗ್ರಾಹಕ ಬಳಕೆಗೆ ಬಂತು 'YouSay' ಶಾರ್ಟ್ ವಿಡಿಯೋ ಆ್ಯಪ್ ಗ್ರಾಹಕರ ಬಳಕೆಗೆ ಬಂತು 'ಯೂಸೇ' ಶಾರ್ಟ್ ವಿಡಿಯೋ ಆ್ಯಪ್](https://etvbharatimages.akamaized.net/etvbharat/prod-images/768-512-10849743-thumbnail-3x2-lek.jpg)
ಹೈದರಾಬಾದ್ ಮೂಲದ ಕೇಟ್ರಿ ಕಂಪ್ಯೂಟರ್ ಸೊಲ್ಯೂಷನ್ಸ್ ಈ ಮೇಡ್ ಇನ್ ಇಂಡಿಯಾ ಆ್ಯಪ್ ಅನ್ನು ಜಾರಿಗೆ ತಂದಿದೆ. ನಿಜವಾದ ಭಾರತೀಯನಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಬಹುದೊಡ್ಡ ವೇದಿಕೆ ಒದಗಿಸುವುದು ನಮ್ಮ ಉದ್ದೇಶ ಎಂದು ಕಂಪನಿ ತಿಳಿಸಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ್ ಅಭಿಯಾನದ ಮೂಲಕ ಕೇಂದ್ರ ಸರ್ಕಾರವು ಇಂತಹ ಆ್ಯಪ್‌ಗಳನ್ನು ಉತ್ತೇಜಿಸುತ್ತಿದೆ.
ಭಾರತ ಸರ್ಕಾರ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಸುರಕ್ಷತೆಗೆ ಬೆದರಿಕೆ ಒಡ್ಡುವ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣಕ್ಕೆ ಈ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಇವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದವು. ಈ ಕಾರಣದಿಂದ ಟಿಕ್‍ಟಾಕ್ ಸೇರಿದಂತೆ 59 ಆ್ಯಪ್ಗಳಿಗೆ ನಿಷೇಧ ಹೇರಲಾಗಿದ್ದು, ಇದೀಗ ಮೇಡ್ ಇನ್ ಇಂಡಿಯಾ ಆ್ಯಪ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.