ನವದೆಹಲಿ: ದೆಹಲಿ ಮೂಲದ ಪಿಸಿ ಫೈನಾನ್ಶಿಯಲ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕ್ಯಾಷ್‌ಬೀನ್ ಆ್ಯಪ್ ನಿಷೇಧಿಸಿರುವ ಆರ್‌ಬಿಐ, ಮೊಬೈಲ್ ಆಧಾರಿತ ಸಾಲ ನೀಡುವ ಆ್ಯಪ್‌ಗಳ ವಿರುದ್ಧ ಸಮರ ಸಾರಿದ್ದು, ಕಠಿಣ ಕ್ರಮದ ಸಂದೇಶವನ್ನು ರವಾನಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್-1934 ರ ಸೆಕ್ಷನ್ 45- IA (6) (iv) ಅಡಿಯಲ್ಲಿ ನೀಡಲಾದ ಅಧಿಕಾರದ ವ್ಯಾಪ್ತಿಯಲ್ಲಿ ರಿಸರ್ವ್ ಬ್ಯಾಂಕ್ ಎಂ/ಎಸ್ ಪಿಸಿ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾದ ನೋಂದಣಿ ಪ್ರಮಾಣಪತ್ರವನ್ನು (CoR) ರದ್ದುಗೊಳಿಸಲಾಗಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
1934ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯ ಸೆಕ್ಷನ್ 45-I ನ ಷರತ್ತು (ಎ) ನಲ್ಲಿ ವ್ಯಾಖ್ಯಾನಿಸಿದಂತೆ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಯ (ಎನ್‌ಬಿಎಫ್‌ಐ) ವ್ಯವಹಾರ ನಡೆಸುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಪಿಸಿ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಪ್ರಾಥಮಿಕವಾಗಿ ಕ್ಯಾಶ್‌ಬೀನ್ ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸಾಲ ನೀಡುವ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.