ಕರ್ನಾಟಕ

karnataka

ETV Bharat / lifestyle

ವಾಟ್ಸ್​​ಆ್ಯಪ್​ ಬಳಕೆದಾರರೇ ಎಚ್ಚರ! ಈ ನಿಯಮ ಒಪ್ಪದಿದ್ದರೆ ನಿಮ್ಮ ಆ್ಯಪ್​ ​ಅಕೌಂಟ್​ ಡಿಲೀಟ್! - ವಾಟ್ಸ್​ಆ್ಯಪ್ ಹೊಸ ಫೀಚರ್​

ಬಳಕೆದಾರರು 2021ರ ಫೆಬ್ರವರಿ 8ರ ಒಳಗೆ ಹೊಸ ಸೇವಾ ನಿಯಮಗಳನ್ನು ಪಾಲಿಸದಿದ್ದರೆ ವಾಟ್ಸ್​​ಆ್ಯಪ್​ನಿಂದ ಹೊರಹೋಗುವ ಸಾಧ್ಯತೆಯಿದೆ. ಬಳಕೆದಾರರ ಅಕೌಂಟ್​ ಸಂಬಂಧಿತ ಎಲ್ಲ ಪ್ರವೇಶವನ್ನು ಕಳೆದುಕೊಳ್ಳಬಹುದು ಎಂದು ಆನ್‌ಲೈನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

WhatsApp
ವಾಟ್ಸ್​​ಆ್ಯಪ್​

By

Published : Dec 5, 2020, 4:30 PM IST

Updated : Dec 5, 2020, 4:47 PM IST

ನವದೆಹಲಿ:ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​​ 2021ರಲ್ಲಿ ಹೊಸ ಸೇವಾ ನಿಯಮಗಳನ್ನು ಪರಿಚಯಿಸುತ್ತಿದ್ದು, ಬಳಕೆದಾರರು ಅವುಗಳನ್ನು ಒಪ್ಪದಿದ್ದರೆ ವಾಟ್ಸ್​​ಆ್ಯಪ್ ಬಳಕೆದಾರರು ತಮ್ಮ ಖಾತೆಗಳನ್ನು ಕಳೆದುಕೊಳ್ಳಬಹುದು.

ಬಳಕೆದಾರರು 2021ರ ಫೆಬ್ರವರಿ 8ರ ಒಳಗೆ ಹೊಸ ಸೇವಾ ನಿಯಮಗಳನ್ನು ಪಾಲಿಸದಿದ್ದರೆ ವಾಟ್ಸ್​​ಆ್ಯಪ್​ನಿಂದ ಹೊರಹೋಗುವ ಸಾಧ್ಯತೆಯಿದೆ. ಬಳಕೆದಾರರ ಅಕೌಂಟ್​ ಸಂಧಿತ ಎಲ್ಲ ಪ್ರವೇಶವನ್ನು ಕಳೆದುಕೊಳ್ಳಬಹುದು ಎಂದು ಆನ್‌ಲೈನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫೆಬ್ರವರಿ 8ರ ಬದಲಾವಣೆಗೆ ಒಳಪಟ್ಟು ನಿಯಮಗಳಿಗೆ 'ಒಪ್ಪುತ್ತೇನೆ' ಎಂದು ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಸೇವಾ ನಿಯಮ ಸ್ವೀಕರಿಸಿದರೇ ಅಪ್ಲಿಕೇಷನ್ ಬಳಸುವುದನ್ನು ಮುಂದುವರಿಸಬಹುದು ಎಂದು ವರದಿಯೊಂದು ಉಲ್ಲೇಖಿಸಿದೆ.

WABetaInfo ಹಂಚಿಕೊಂಡ ಸ್ಕ್ರೀನ್‌ಶಾಟ್‌ ಪ್ರಕಾರ, ಫೇಸ್‌ಬುಕ್ ಒಡೆತನದ ಕಂಪನಿಯ ಹೊಸ ನೀತಿ ನವೀಕರಣವು ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಡೇಟಾಗೆ ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದೆ. ವಾಟ್ಸ್​ಆ್ಯಪ್ ಚಾಟ್‌ಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಫೇಸ್‌ಬುಕ್ ನೀಡಿದ ಸೇವೆಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆಯೂ ಮಾಹಿತಿ ನೀಡಿದೆ.

ನೀವು ಬದಲಾವಣೆಗಳನ್ನು ಒಪ್ಪದಿದ್ದರೆ ನಿಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಆ್ಯಪ್​ ಸೆಟ್ಟಿಂಗ್‌ಗಳಲ್ಲಿ ಅಳಿಸಬಹುದು ಎಂದು ವರದಿ ಹೇಳುತ್ತದೆ.

ಆಂಡ್ರಾಯ್ಡ್ (2.20.206.19) ಮತ್ತು ಐಒಎಸ್ (2.20.130) ನವೀಕರಣಗಳನ್ನು ವಾಟ್ಸ್​​ಆ್ಯಪ್​ ಬಿಡುಗಡೆ ಮಾಡಿದೆ. ಫೇಸ್‌ಬುಕ್ ಒಡೆತನದ ಪ್ಲಾಟ್‌ಫಾರ್ಮ್ ಹೊಸ ಫೀಚರ್​ ಸಹ ಹೊರತರಲಿದೆ. ಅದು ಅಪ್ಲಿಕೇಷನ್‌ನಲ್ಲಿನ ಬಳಕೆದಾರರಿಗೆ ನಿರ್ದಿಷ್ಟ ಮಾಹಿತಿ ಘೋಷಿಸಲು ಆ್ಯಪ್​ಗೆ ನೆರವಾಗುತ್ತದೆ. ಆದರೆ, ಜಾಹೀರಾತುಗಳನ್ನು ಒಳಗೊಂಡಿರುವುದಿಲ್ಲ ಎಂದು ವರದಿ ಹೇಳಿದೆ.

Last Updated : Dec 5, 2020, 4:47 PM IST

ABOUT THE AUTHOR

...view details