ನವದೆಹಲಿ:ಐಒಎಸ್ ಬಳಕೆದಾರರು ತಮ್ಮ ಆಂಡ್ರಾಯ್ಡ್ ಬಳಕೆದಾರರ ಜೊತೆ ಚಾಟ್ ಹಿಸ್ಟರಿ ಶೇರ್ ಮಾಡಲು ವಾಟ್ಸ್ಆ್ಯಪ್ ಹೊಸ ಸಾಧನವನ್ನು ಪರೀಕ್ಷಿಸುತ್ತಿದೆ. ಜನಪ್ರಿಯ ಅಪ್ಲಿಕೇಶನ್ ಆಗಿರುವ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಐಒಎಸ್‌ನಿಂದ ಆಂಡ್ರಾಯ್ಡ್‌ಗೆ ಚಾಟ್ ಹಿಸ್ಟರಿ ವರ್ಗಾಯಿಸಲು ಒಂದು ಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದೆ.
ಚಾಟ್ ಹಿಸ್ಟರಿ ಶೇರಿಂಗ್ಗಾಗಿ ಹೊಸ ಫೀಚರ್ಸ್ ಅಭಿವೃದ್ಧಿ ಪಡಿಸುತ್ತಿರುವ ವಾಟ್ಸ್ಆ್ಯಪ್! - ಐಒಎಸ್‌ನಿಂದ ಆಂಡ್ರಾಯ್ಡ್ ವಾಟ್ಸಾಪ್ ಹಿಸ್ಟರಿ ವರ್ಗಾಯಿಸುವ ಸಾಧನ,
ಐಒಎಸ್ ಬಳಕೆದಾರರು ತಮ್ಮ ಆಂಡ್ರಾಯ್ಡ್ ಬಳಕೆದಾರರಿಗೆ ಚಾಟ್ ಹಿಸ್ಟರಿ ಶೇರ್ ಮಾಡಲು ವಾಟ್ಸ್ಆ್ಯಪ್ ಹೊಸ ಫಿಚರ್ನ್ನು ಅಭಿವೃದ್ಧಿ ಪಡಿಸುತ್ತಿದ್ದು, ಅದು ಈಗ ಪರೀಕ್ಷಾ ಹಂತದಲ್ಲಿದೆ.
ವಾಟ್ಸಾಪ್
ವಾಟ್ಸ್ಆ್ಯಪ್ನ ಹೊಸ ವರ್ಗಾವಣೆ ಸಾಧನವು ಗೂಗಲ್‌ನಿಂದ ಅಭಿವೃದ್ಧಿಯಲ್ಲಿರುವ ಹೊಸ ‘ಸ್ವಿಚ್ ಟು ಆಂಡ್ರಾಯ್ಡ್’ ಐಒಎಸ್ ಆಪ್‌ನ ಭಾಗವಾಗಬಹುದಾಗಿದೆ. ಬಳಕೆದಾರರು ಆಂಡ್ರಾಯ್ಡ್‌ನಿಂದ ಐಒಎಸ್‌ಗೆ ವಲಸೆ ಹೋಗಲು ಆಪಲ್ ನೀಡುವ 'ಮೂವ್ ಟು ಐಒಎಸ್' ಆಪ್‌ನಂತೆಯೇ ಈ ಸಾಧನವನ್ನು ಅಭಿವೃದ್ಧಿಪಡಿಸಲು ವಾಟ್ಸ್ಆ್ಯಪ್ ಯೋಚಿಸುತ್ತಿದೆ.