ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ):ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಕ್ಯಾಮರಾದ ಮೂಲಕ ವ್ಯಕ್ತಿಯೊಬ್ಬರ ಮುಖವನ್ನು ನೋಡಿ ರಕ್ತದೊತ್ತಡವನ್ನು ಲೆಕ್ಕಹಾಕಬಹುದಾದ ಸಾಧನವನ್ನು ಅನ್ನು ಅಭಿವೃದ್ಧಿಪಡಿಸಿರುವುದಾಗಿ Binah.ai ಅಪ್ಲಿಕೇಷನ್ ಘೋಷಿಸಿಕೊಂಡಿದೆ.
Binah.ai ಅಪ್ಲಿಕೇಷನ್ ಆರೋಗ್ಯಕ್ಕೆ ಸಂಬಂಧಿಸಿದ ಅಪ್ಲಿಕೇಷನ್ ಅಗಿದ್ದು, ಈ ಅಪ್ಲಿಕೇಷನ್ನಲ್ಲಿ ಕೆಲವೊಂದು ಸಾಧನಗಳಿದ್ದು, ಇದು ಆರೋಗ್ಯ ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುತ್ತಿತ್ತು. ಪ್ರಸ್ತುತ ಈ ಆರೋಗ್ಯ ಸೇವೆಗಳ ಪಟ್ಟಿಗೆ ರಕ್ತದೊತ್ತಡ ಕಂಡುಹಿಡಿಯುವ ತಂತ್ರಜ್ಞಾನವುಳ್ಳ ಸಾಧನವೊಂದು ಸೇರ್ಪಡೆಯಾಗಿದೆ.
ಈಗ ಸದ್ಯಕ್ಕೆ Binah.ai ಆ್ಯಪ್ನೊಂದಿಗೆ ಪಾಲುದಾರ ವ್ಯವಹಾರ ಮಾಡುವವರು ಮಾತ್ರವೇ ಈ ಆ್ಯಪ್ ಅನ್ನು ಬಳಸಬಹುದಾಗಿದೆ. ಅಂದರೆ ನೀವು ಕೆಲವೊಂದು ನಿಯಮಗಳು ಅಥವಾ ಷರತ್ತುಗಳ ಆಧಾರದ ಮೇಲೆ ಹಣ ಪಾವತಿಸಿದರೆ ಮಾತ್ರ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಲು ಮತ್ತು ಬಳಸಿಕೊಳ್ಳಲು ಅವಕಾಶವಿರುತ್ತದೆ. ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮಗೆ ಎಲ್ಲಾ ಸಲಹೆಗಳನ್ನು ನೀಡಲಾಗುತ್ತದೆ.
ಕೈಗಳಿಗೆ ಬೆಲ್ಟ್ ರೀತಿಯ ಪಟ್ಟಿ ಕಟ್ಟಿಕೊಳ್ಳದೇ ರಕ್ತದೊತ್ತಡವನ್ನು ಪತ್ತೆ ಹಚ್ಚುವುದು ಹೃದಯರೋಗ ತಜ್ಞರು ಮತ್ತು ಟೆಕ್ ಕಂಪನಿಗಳಿಗೆ ಸವಾಲಾಗಿದ್ದು, ಈ ಸವಾಲನ್ನು ಈ ಅಪ್ಲಿಕೇಷನ್ ಪೂರೈಸಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.