ನವದೆಹಲಿ:ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸುವವರಿಗೆ ಗೂಗಲ್ ಅಸಿಸ್ಟೆಂಟ್ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಆಡಿಯೋ ಸಂದೇಶಗಳನ್ನು ಕಳುಹಿಸಲು ಬಳಕೆದಾರರಿಗೆ ಇದು ಸಹಾಯ ಮಾಡುತ್ತದೆ.
ಈ ಫೀಚರ್ನ ಬಳಕೆಯನ್ನು ಪ್ರಾರಂಭಿಸಲು, ‘ಹೇ ಗೂಗಲ್, ಆಡಿಯೋ ಸಂದೇಶ ಕಳುಹಿಸು (Hey Google, send an audio message)’ ಅಥವಾ ‘ಹೇ ಗೂಗಲ್, ನಾನು ದಾರಿಯಲ್ಲಿದ್ದೇನೆ ಎಂದು ರಾಜೇಶ್‌ಗೆ ಆಡಿಯೋ ಸಂದೇಶವನ್ನು ಕಳುಹಿಸು (Hey Google, send an audio message to Rajesh, saying I'm on the way.)’ ಎಂದು ಹೇಳಿದರೆ ಆಯ್ತು ಆಡಿಯೋ ಸಂದೇಶ ನೀವು ಇಚ್ಛಿಸಿದವರಿಗೆ ಸೆಂಡ್ ಆಗುತ್ತದೆ. ಈ ವೈಶಿಷ್ಟ್ಯವು ಇಂಗ್ಲಿಷ್‌ನಲ್ಲಿ ಮಾತ್ರವಲ್ಲದೆ ಬ್ರೆಜಿಲ್, ಪೋರ್ಚುಗೀಸ್ ಭಾಷೆಗಳಲ್ಲಿ ಸಹ ಲಭ್ಯವಿದೆ.