ಕರ್ನಾಟಕ

karnataka

ETV Bharat / lifestyle

ಬಿಡುಗಡೆಗೆ ಸಜ್ಜಾದ Realme DIZO ಸ್ಮಾರ್ಟ್​ವಾಚ್: ಫೀಚರ್ಸ್​ ಏನೇನು ಗೊತ್ತಾ? - Realme DIZO ಸ್ಮಾರ್ಟ್​ವಾಚ್,

Realme ಕಂಪನಿ ಈಗ Realme DIZO ಸ್ಮಾರ್ಟ್ ವಾಚ್​ ಬಿಡುಗಡೆಗೆ ಸಜ್ಜಾಗಿದೆ. ಇದು ಹಾರ್ಟ್ ರೇಟ್ ಸೆನ್ಸಾರ್, ರಕ್ತದಲ್ಲಿನ ಆಮ್ಲಜನಕ ಮಟ್ಟ ಅಳೆಯುವ ಎಸ್​ಪಿಓ2 (SpO2) ಟೂಲ್​, ನಿದ್ರೆ, ನಡಿಗೆ ಮುಂತಾದವುಗಳನ್ನು ಮಾನಿಟರ್ ಮಾಡುವ ಸಾಮರ್ಥ್ಯ ಹೊಂದಿದೆ.

realmes-dizo-brand-launches-its-first-affordable-smartwatch
ಬಿಡುಗಡೆಯಾಗಲಿದೆ ರಿಯಲ್​ಮೀ ಡಿಝೋ ಸ್ಮಾರ್ಟ್​ವಾಚ್: ಫೀಚರ್ಸ್​ ಏನೇನು ಗೊತ್ತಾ?

By

Published : Aug 3, 2021, 5:18 PM IST

ನವದೆಹಲಿ:ರಿಯಲ್​​ಮಿ ಕಂಪನಿಯ ಬ್ರಾಂಡ್ ಡಿಝೋ (DIZO) ಅತಿ ಕಡಿಮೆ ಬೆಲೆಯ ಸ್ಮಾರ್ಟ್​​ವಾಚ್​ಗಳನ್ನು ಆಗಸ್ಟ್​ 6 ರಿಂದ ಬಿಡುಗಡೆ ಮಾಡಲಿದ್ದು, ಮೊದಲ ಬಾರಿಗೆ ಫ್ಲಿಪ್​ಕಾರ್ಟ್​​ನಲ್ಲಿ ಮಾರಾಟವಾಗಲಿದೆ.

ಸ್ಮಾರ್ಟ್​ ವಾಚ್​ನ ಬೆಲೆ ರೂ. 3,499 ಇದ್ದು, ಫ್ಲಿಪ್​ಕಾರ್ಟ್​​ನಲ್ಲಿ ಇದರ ಬೆಲೆ ರೂ.2,999 ಇರಲಿದೆ. ಫ್ಲಿಪ್​ಕಾರ್ಟ್​ಗೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ರಿಟೇಲ್​ ಮಳಿಗೆಗಳಿಗೂ ಈ ಸ್ಮಾರ್ಟ್ ​ವಾಚ್​ ತಲುಪಲಿದೆ.

3.5 ಸೆಂಟಿಮೀಟರ್​ ಅಂದರೆ 1.4 ಇಂಚು ಹೈ ರೆಸಲ್ಯೂಷನ್ ಟಚ್​ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್​ ವಾಚ್​, 90 ಸ್ಪೋರ್ಟ್​ ಮೋಡ್, 12 ದಿನಗಳ ಬ್ಯಾಟರಿ ಲೈಫ್​, ಹೆಲ್ತ್ ಮತ್ತು ಫಿಟ್ನೆಸ್ ಮಾನಿಟರಿಂಗ್​, ಐಪಿ68 ವಾಟರ್ ರೆಸಿಸ್ಟೆಂಟ್​ ಮತ್ತು ಸ್ಮಾರ್ಟ್​ ಎಐಒಟಿ ಕಂಟ್ರೋಲ್ ಮುಂತಾದ ಫೀಚರ್​​ಗಳನ್ನು ಒಳಗೊಂಡಿದೆ.

ನಾವು ಈ ಸ್ಮಾರ್ಟ್​ ವಾಚ್​ಗೆ ಉತ್ತಮ ರೆಸ್ಪಾನ್ಸ್​ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಂದಿದ್ದೇವೆ. ಡಿಝೋ ವಾಚ್​ ನಮ್ಮ ಮಾರುಕಟ್ಟೆ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಅತ್ಯಂತ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ವಾಚ್ ನೀಡಲಾಗುತ್ತಿದೆ ಎಂದು ಡಿಝೋ ಇಂಡಿಯಾದ ಸಿಇಓ ಅಭಿಲಾಷ್ ಪಂಡಾ ಹೇಳಿದ್ದಾರೆ.

ಈ ಸ್ಮಾರ್ಟ್ ವಾಚ್​ ಹಾರ್ಟ್ ರೇಟ್ ಸೆನ್ಸಾರ್, ರಕ್ತದಲ್ಲಿನ ಆಮ್ಲಜನಕ ಮಟ್ಟ ಅಳೆಯುವ ಎಸ್​ಪಿಓ2 (SpO2) ಟೂಲ್​, ನಿದ್ರೆ, ನಡಿಗೆ ಮುಂತಾದವುಗಳನ್ನು ಮಾನಿಟರ್ ಮಾಡುವ ಸಾಮರ್ಥ್ಯ ಹೊಂದಿದೆ.

315ಎಂಎಹೆಚ್​ (315mAh) ಬ್ಯಾಟರಿ, 5.0 ಟೆಕ್ನಾಲಜಿಯ ಬ್ಲೂಟೂತ್​ ಹೊಂದಿದ್ದು, ಒಂದು ಬಾರಿ ಚಾರ್ಜಿಂಗ್ ಮಾಡಿದ್ರೆ 12 ದಿನಗಳ ಕಾಲ ಬಳಸಬಹುದಾಗಿದೆ. ರಿಯಲ್​ ಮೀ ಲಿಂಕ್ ಆ್ಯಪ್​ ಮೂಲಕ ಈ ಸ್ಮಾರ್ಟ್​ ವಾಚ್​ ಅನ್ನು ನಿಯಂತ್ರಣ ಮಾಡಬಹುದಾಗಿದೆ.

ಇದನ್ನೂ ಓದಿ: Watch Video: ಮಂಗನನ್ನು ನುಂಗಿದ ಬೃಹತ್​ ಹೆಬ್ಬಾವು

ABOUT THE AUTHOR

...view details