ಕರ್ನಾಟಕ

karnataka

ETV Bharat / lifestyle

ಅಕೌಂಟ್​ ಇಲ್ಲದಿದ್ದರೂ ಫೇಸ್​ಬುಕ್​ ಲೈವ್​ ವಿಡಿಯೋ ನೋಡಬಹುದು! - Public Switch Telephone Network

ಲಾಕ್​ಡೌನ್​ನಿಂದಾಗಿ ಜನ ವಿಡಿಯೋ ಕಾಲ್​ ಮೂಲಕ ಹೆಚ್ಚೆಚ್ಚು ಸಂಪರ್ಕ ಸಾಧಿಸುತ್ತಿದ್ದಾರೆ. ಹೀಗಾಗಿ ಫೇಸ್​ಬುಕ್​ ತನ್ನ ಬಳಕೆದಾರರಲ್ಲದವರಿಗೂ ಸಹ ಲೈವ್​ ವಿಡಿಯೋ ನೋಡುವ ಅವಕಾಶ ಕಲ್ಪಿಸಿದೆ.

Now go live on Facebook
Now go live on Facebook

By

Published : Mar 30, 2020, 7:30 PM IST

ಕೋವಿಡ್​-19 ಲಾಕ್​ಡೌನ್​ನಿಂದಾಗಿ ಜಗತ್ತಿನಾದ್ಯಂತ ಲೈವ್​ ವಿಡಿಯೋ ಬಳಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಹೀಗಾಗಿ ಈಗ ಫೇಸ್​​ಬುಕ್​ ತನ್ನ ಬಳಕೆದಾರರಲ್ಲದವರಿಗೂ ಲೈವ್​ ಸ್ಟ್ರೀಮ್ ನೋಡುವ ಅವಕಾಶ ಕಲ್ಪಿಸಿದೆ. ಈ ಮುಂಚೆ ಈ ಸೌಲಭ್ಯ ಡೆಸ್ಕ್​ಟಾಪ್​ಗಳಲ್ಲಿ ಮಾತ್ರ ಲಭ್ಯವಿತ್ತು.

ಫೇಸ್​ಬುಕ್​ ಅಕೌಂಟ್​ ಇಲ್ಲದವರು ಕೂಡ ಫೇಸ್​ಬುಕ್​ ಲೈವ್ ವಿಡಿಯೋ ವೀಕ್ಷಿಸುವ ಆಪ್ಷನ್​ ಈಗಾಗಲೇ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಐಫೋನ್​ಗಳಿಗೂ ಈ ಸೌಕರ್ಯ ವಿಸ್ತರಿಸಲಾಗುವುದು.

ಟೋಲ್​ ಫ್ರೀ ನಂಬರ್ ಮೂಲಕ ಲೈವ್​ ಸ್ಟ್ರೀಮ್​ ಆಡಿಯೋ ಆಲಿಸುವ ಸೌಲಭ್ಯ 'ಪಬ್ಲಿಕ್ ಸ್ವಿಚ್ ಟೆಲಿಫೋನ್​ ನೆಟ್​ವರ್ಕ್​' (Public Switch Telephone Network) ಎಂಬ ಹೊಸ ಆಯ್ಕೆಯನ್ನು ಸಹ ಫೇಸ್​ಬುಕ್​ ಪರಿಚಯಿಸಿದೆ.

ಫೇಸ್​ಬುಕ್​ ಲೈವ್​ 'ಆಡಿಯೋ ಮಾತ್ರ' ಮೋಡ್​ನಲ್ಲಿಯೂ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಲಾಕ್​ಡೌನ್​ನಿಂದಾಗಿ ಕೋಟ್ಯಂತರ ಜನ ಮನೆಯಲ್ಲೇ ಇರುವುದರಿಂದ ಫೇಸ್​ಬುಕ್​ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಫೇಸ್​ಬುಕ್​ ಗ್ರೂಪ್​ ವಿಡಿಯೋ ಕಾಲ್​ ಮಾಡುವುದು ಶೇ. 70ರಷ್ಟು ಹೆಚ್ಚಳ ಕಂಡಿದ್ದು, ಒಟ್ಟಾರೆಯಾಗಿ ಜನ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ನೋಡುವುದು ಏರಿಕೆಯಾಗಿದೆ.

ವಿಡಿಯೋಗಳಿಂದ ನೆಟ್​ವರ್ಕ್​ ವೈಫಲ್ಯತೆ ತಪ್ಪಿಸಲು ಭಾರತ ಹಾಗೂ ಲ್ಯಾಟಿನ್​ ಅಮೆರಿಕಾಗಳಲ್ಲಿ ಫೇಸ್​ಬುಕ್​ ತನ್ನ ವಿಡಿಯೋ ಗುಣಮಟ್ಟವನ್ನು ಕಡಿಮೆ ಮಾಡಿದೆ.

ABOUT THE AUTHOR

...view details