ನವದೆಹಲಿ: ವಿಶ್ವದಾದ್ಯಂತ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ದೈತ್ಯ ಆ್ಯಪ್ಗಳೇ ಕೆಲ ಕಾಲ ಕಾರ್ಯ ಸ್ಥಗಿತಗೊಳಿಸಿದ್ದವು. ವೆಬ್ಸೈಟ್ಗಳಾದ ಅಮೆಜಾನ್, ಪೇಟಿಯಂ ಸೇರಿದಂತೆ ಪ್ರಮುಖ ಸೈಟ್ಗಳು ಗುರುವಾರದಂದು ಸುಮಾರು 1 ಗಂಟೆಯ ನಂತರ ಯಥಾಸ್ಥಿತಿಗೆ ಮರಳಿವೆ. ಇದರಲ್ಲಿ ಕೆಲ ವೆಬ್ಸೈಟ್ಗಳು ಮಧ್ಯಂತರವಾಗಿ ಕಾರ್ಯನಿರ್ವಹಿಸಿದರೆ, ಇನ್ನೂ ಕೆಲವು ಸಂಪೂರ್ಣ ಸ್ಥಗಿತಗೊಂಡಿದ್ದವು.
ವಿಶ್ವದಾದ್ಯಂತ ಇಂಟರ್ನೆಟ್ ಸೇವೆಗೆ ತೊಡಕು..ದೈತ್ಯ ಆ್ಯಪ್ಗಳ ಸೇವೆ ಸ್ಥಗಿತ - ಹೆಚ್ಎಸ್ಬಿಸಿ ಬ್ಯಾಂಕ್
ಇಂಟರ್ನೆಟ್ ಸರ್ವರ್ ಸೇವೆ ಒದಗಿಸುವ ಅಮೆರಿಕನ್ ಸಂಸ್ಥೆ ಅಕಮೈ ಮತ್ತು ಡಿಎನ್ಎಸ್ ಸರ್ವರ್ ಬಳಸುತ್ತಿರುವ ವೆಬ್ಸೈಟ್ಗಳು ಸಮಸ್ಯೆಗೆ ಒಳಗಾಗಿರುವುದು ಪತ್ತೆಯಾಗಿದೆ. ಹೀಗಾಗಿ ಅಮೆರಿಕನ್ ಬ್ಯಾಂಕ್ಗಳು, ಏರ್ಲೈನ್ ವೆಬ್ಸೈಟ್ಗಳು, ಡಿಶ್ನಿ ಹಾಟ್ಸ್ಟಾರ್, ಸೋನಿ ಲೈವ್, ಪ್ಲೇ ಸ್ಟೇಷನ್ ನೆಟ್ವರ್ಕ್, ಹೆಚ್ಎಸ್ಬಿಸಿ ಬ್ಯಾಂಕ್ ಸೇವೆ ಸಹ ಸ್ಥಗಿತಗೊಂಡಿದ್ದವು.

ಪ್ರಮುಖವಾಗಿ ಇಂಟರ್ನೆಟ್ ಸೇವೆ ಒದಗಿಸುವ ಅಮೆರಿಕನ್ ಸಂಸ್ಥೆ ಅಕಮೈ ಮತ್ತು ಡಿಎನ್ಎಸ್ ಸರ್ವರ್ ಬಳಸುತ್ತಿರುವ ವೆಬ್ಸೈಟ್ಗಳು ಸಮಸ್ಯೆಗೆ ಒಳಗಾಗಿರುವುದು ಪತ್ತೆಯಾಗಿದೆ. ಹೀಗಾಗಿ ಅಮೆರಿಕನ್ ಬ್ಯಾಂಕ್ಗಳು, ಏರ್ಲೈನ್ ವೆಬ್ಸೈಟ್ಗಳು, ಡಿಶ್ನಿ ಹಾಟ್ಸ್ಟಾರ್, ಸೋನಿ ಲೈವ್, ಪ್ಲೇ ಸ್ಟೇಷನ್ ನೆಟ್ವರ್ಕ್, ಹೆಚ್ಎಸ್ಬಿಸಿ ಬ್ಯಾಂಕ್ ಸಹ ಸ್ಥಗಿತಗೊಂಡಿದ್ದವು.
ಈ ರೀತಿ ಹಿಂದೆಯೂ ಸಹ ಆಗುತ್ತಿತ್ತು. ಆದರೆ, ಈ ವರ್ಷ ಎರಡನೇ ಬಾರಿಗೆ ವಿಶ್ವದಾದ್ಯಂತ ಸರ್ವರ್ ಡೌನ್ ಆಗಿದ್ದು, ವ್ಯವಹಾರ ಸಂಬಂಧಿ ಸೈಟ್ಗಳ ಹೆಚ್ಚಿನ ಸಮಸ್ಯೆ ಒಳಗಾಗಿದ್ದವು. ಸಾಫ್ಟವೇರ್ ಅಪ್ಡೇಟ್ ವೇಳೆ ಬಗ್ ಸೇರಿಕೊಂಡಿದ್ದ ಪರಿಣಾಮವಾಗಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯವಾಗಿತ್ತು, ಸದ್ಯ ಈ ಸಮಸ್ಯೆ ಸರಿಪಡಿಸಿರುವುದಾಗಿ ಅಕಮೈ ಸಂಸ್ಥೆ ತಿಳಿಸಿದೆ.