ನವದೆಹಲಿ: ಕೋವಿಡ್-19ನಿಂದ ಪಾರಾಗಬೇಕಾದ್ರೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ನಿಂದ ಆಗಾಗ ಕೈತೊಳೆಯುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಮುಂದುದಿರುವ ಮಾರ್ಗಗಳು.
ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕೆಲಸ- ಕಾರ್ಯಗಳನ್ನು ಮುಂದುವರೆಸುವ ಅವಶ್ಯಕತೆ ಇರುವುದನ್ನು ಮನಗಂಡ ಭಾರತೀಯ ಡೆವಲಪರ್ಸ್, ವಿಶ್ವದರ್ಜೆಯ ಐಒಎಸ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ಅತ್ಯಾಧುನಿಕ ಐಒಎಸ್ ಹೇಗೆ ಕೆಲಸ ಮಾಡಲಿದೆ ಎಂಬುದನ್ನ ಡೆವಲಪರ್ಸ್‌ಗಳಾದ ವಿನೋದ್ ಕುಮಾರ್ ಮತ್ತು ಹೇಮಂತ್ ಕುಮಾರ್ 'ಎನ್‌ಪಾಸ್ ಪಾರ್‌ವರ್ಡ್ ಮ್ಯಾನೇಜರ್' ಅನ್ನು ಉದಾಹರಣೆ ಮೂಲಕ ವಿವರಿಸಿದ್ದಾರೆ. ಎನ್‌ಪಾಸ್ ಎಂಬುದು ಆಫ್‌ಲೈನ್ ಪಾಸ್‌ವರ್ಡ್ ಮ್ಯಾನೇಜರ್. ಇದು ಬಳಕೆದಾರರ ಪಾಸ್‌ವರ್ಡ್ ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುತ್ತದೆ. ಇದು ಮ್ಯಾಕ್, ಐಫೋನ್, ವಾಚ್ ಮತ್ತು ಐಪ್ಯಾಡ್‌ಗಳಿಗೆ ನೆರವಾಗಲಿದೆ.