ನವದೆಹಲಿ:ಟೆಕ್ ದೈತ್ಯ ಗೂಗಲ್ ಶೀಘ್ರದಲ್ಲೇ ಕ್ಯಾಲೆಂಡರ್ನಲ್ಲಿ 'ಟೈಮ್ ಇನ್ಸೈಟ್ಸ್' ಪ್ಯಾನಲ್ ಎಂಬ ಹೊಸ ಫೀಚರ್ನ್ನು ಅಳವಡಿಸಲಿದ್ದು, ಇದು ಬಳಕೆದಾರರು ತಮ್ಮ ಕೆಲಸದ ವಾರದಲ್ಲಿ ಎಷ್ಟು ಸಮಯವನ್ನು ಮೀಟಿಂಗ್‌ಗಳಲ್ಲಿ ವ್ಯಯಿಸಿದ್ದಾರೆ ಎಂಬುದನ್ನು ತಿಳಿಸುತ್ತದೆ.
ಇನ್ಮುಂದೆ ಗೂಗಲ್ ಕ್ಯಾಲೆಂಡರ್ನಲ್ಲಿ ಲಭ್ಯವಾಗಲಿದೆ 'ಟೈಮ್ ಇನ್ಸೈಟ್ಸ್' ಪ್ಯಾನಲ್: ಏನಿದರ ವಿಶೇಷತೆ?
ಗೂಗಲ್ ಶೀಘ್ರದಲ್ಲೇ ಕ್ಯಾಲೆಂಡರ್ನಲ್ಲಿ 'ಟೈಮ್ ಇನ್ಸೈಟ್ಸ್' ಪ್ಯಾನಲ್ ಎಂಬ ಹೊಸ ಫೀಚರ್ನ್ನು ಅಳವಡಿಸಲಿದೆ. ಇದು ಬಳಕೆದಾರರ ಒಟ್ಟು ಸಮಯ, ಸಭೆಗಳಲ್ಲಿ ಕಳೆದ ಸಮಯ ಮತ್ತು ಅವರು ಹೆಚ್ಚು ಸಮಯ ಕಳೆಯಬೇಕಾದ ಜನರ ಪಟ್ಟಿ ಸೇರಿದಂತೆ ಇತರ ಮಾಹಿತಿಯನ್ನು ತೋರಿಸುತ್ತದೆ.
ಗೂಗಲ್ ಕ್ಯಾಲೆಂಡರ್
ದಿ ವರ್ಜ್‌ನಿಂದ ಗುರುತಿಸಲ್ಪಟ್ಟ ಗೂಗಲ್‌ನ ಬ್ಲಾಗ್ ಪೋಸ್ಟ್ ಈ ಮಾಹಿತಿಯನ್ನು ನೀಡಿದ್ದು, 'ಟೈಮ್ ಇನ್ಸೈಟ್ಸ್' ಫೀಚರ್ ಬಳಕೆದಾರರ ಒಟ್ಟು ಸಮಯ, ಸಭೆಗಳಲ್ಲಿ ಕಳೆದ ಸಮಯ ಮತ್ತು ಅವರು ಹೆಚ್ಚು ಸಮಯ ಕಳೆಯಬೇಕಾದ ಜನರ ಪಟ್ಟಿ ಸೇರಿದಂತೆ ಇತರ ಮಾಹಿತಿಯನ್ನು ತೋರಿಸುತ್ತದೆಯಂತೆ.
ಇನ್ನು ಫೀಚರ್ ಹೇಗಿರುತ್ತದೆ ಎಂಬುದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ಹಂಚಿಕೊಂಡಿದೆ. ಮೇಲೆ ಪಟ್ಟಿ ಮಾಡಲಾದ ವೈಶಿಷ್ಟ್ಯಗಳ ಜೊತೆಗೆ, ಗುಂಪು ಸಭೆಗಳ ಸಮಯ ಮತ್ತು ಒಂದೊಂದೇ ಸಭೆಯಲ್ಲಿ ವ್ಯಕ್ತಿ ವ್ಯಯಿಸಿದ ಸಮಯದ ಬಗ್ಗೆ ತೋರಿಸುತ್ತದೆ.