ಸ್ಯಾನ್ ಫ್ರಾನ್ಸಿಸ್ಕೋ (ಯು.ಎಸ್):ಬಳಕೆದಾರರು ಸಾಮಾಜಿಕ ಮಾಧ್ಯಮದ ಪೋಸ್ಟ್ಗಳ ವಿಡಂಬನಾತ್ಮಕ ವಿಷಯವನ್ನು ನಿಜ ಎಂದು ನಂಬಿ ಗೊಂದಲಕ್ಕೊಳಗಾಗುತ್ತಾರೆ. ಹೀಗಾಗಿ ನಕಲಿ ಸುದ್ದಿಗಳ ವಿರುದ್ಧ ಹೋರಾಡುವುದೇ ಕಷ್ಟದ ಕೆಲಸ. ಆದರೆ, ಇದೀಗ ವಿಷಯಗಳನ್ನು ಸ್ಪಷ್ಟಪಡಿಸಲು, ಫೇಸ್‌ಬುಕ್ ಕೆಲವು ಪೋಸ್ಟ್‌ಗಳನ್ನು ಲೇಬಲ್ ಮಾಡಲು ಬಯಸಿದೆ.
ಫೇಸ್‌ಬುಕ್ ಈಗಾಗಲೇ ಜನರು ನೋಡುವ ಪೇಜ್ಗಳ ಕುರಿತು ಪರೀಕ್ಷಿಸುತ್ತಿದೆ ಎಂದು ಹೇಳಿದ್ದು, ಯುಎಸ್ನಲ್ಲಿ ಬಳಕೆದಾರರಿಗಾಗಿ ಪ್ರಯೋಗವನ್ನು ಪ್ರಾರಂಭಿಸಲಾಗಿದೆ.