ಕರ್ನಾಟಕ

karnataka

ETV Bharat / lifestyle

ಸರ್ವರ್ ​ಡೌನ್​ಗೆ ಕ್ಷಮೆಯಾಚಿಸಿದ ಫೇಸ್​​ಬುಕ್: ಸಮಸ್ಯೆ ಪರಿಹರಿಸಿರುವುದಾಗಿ ಸ್ಪಷ್ಟನೆ - ಫೇಸ್​ಬುಕ್ ಸ್ಥಗಿತ

ಫೇಸ್​ಬುಕ್ ಅಧೀನದಲ್ಲಿರುವ ಅಪ್ಲಿಕೇಷನ್​ಗಳು ಸರ್ವರ್​ ಡೌನ್​ನಿಂದ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿದ್ದು, ಫೇಸ್​ಬುಕ್ ಬಳಕೆದಾರರಲ್ಲಿ ಕ್ಷಮೆಯಾಚಿಸಿದೆ.

facebook says things have been fixed after global outage
ಸರ್ವರ್ ​ಡೌನ್​ಗೆ ಕ್ಷಮೆಯಾಚಿದ ಫೇಸ್​​ಬುಕ್: ಸಮಸ್ಯೆ ಪರಿಹರಿಸಿರುವುದಾಗಿ ಸ್ಪಷ್ಟನೆ

By

Published : Oct 9, 2021, 9:26 AM IST

Updated : Oct 9, 2021, 10:58 AM IST

ವಾಷಿಂಗ್ಟನ್(ಅಮೆರಿಕ): ಒಂದೇ ವಾರದಲ್ಲಿ ಎರಡನೇ ಬಾರಿಗೆ ಮಾರ್ಕ್ ಜುಕರ್ ಬರ್ಗ್ ಒಡೆತನದ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರಣದಿಂದ ಫೇಸ್​ಬುಕ್ ಕ್ಷಮೆಯಾಚಿಸಿದೆ.

ಸಾಮಾಜಿಕ ಜಾಲತಾಣಗಳು ಸ್ಥಗಿತಗೊಳ್ಳಲು ದೋಷಯುಕ್ತ ಸಂರಚನೆಯೇ ಕಾರಣ ಎಂದು ಫೇಸ್​ಬುಕ್ ಸ್ಪಷ್ಟನೆ ನೀಡಿದ್ದು, ಶುಕ್ರವಾರ ಎರಡು ಗಂಟೆಗಳ ಕಾಲ ಸೇವೆಗಳು ಸ್ಥಗಿತವಾದ ಕಾರಣದಿಂದ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದಿದೆ.

ಎಲ್ಲಾ ಸಮಸ್ಯೆಗಳನ್ನು ಈಗ ಪರಿಹರಿಸಲಾಗಿದೆ. ಈ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎಂದು ಫೇಸ್​ಬುಕ್ ಹೇಳಿಕೊಂಡಿದೆ. ಈ ಬಾರಿ ಸರ್ವರ್ ಸ್ಥಗಿತಗೊಂಡಾಗ ಇನ್ಸ್​ಟಾಗ್ರಾಂನಲ್ಲಿ ಫೀಡ್​ ಅನ್ನು ಬಳಕೆದಾರರು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಫೇಸ್​ಬುಕ್ ಮೆಸೆಂಜರ್​​ನಲ್ಲಿ ಸಂದೇಶಗಳನ್ನು ಕಳುಹಿಸಲು ಆಗುತ್ತಿರಲಿಲ್ಲ.

ಇನ್ಸ್​ಟಾ, ಮೆಸೆಂಜರ್​ಗಳ ಸ್ಥಗಿತಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಳಕೆದಾರರು ಟ್ವಿಟರ್​ನಲ್ಲಿ ಮೀಮ್ಸ್​ಗಳನ್ನು ಹಂಚಿಕೊಂಡಿದ್ದಾರೆ. ಈ ಮೀಮ್ಸ್​ಗಳಿಗೂ ಕೂಡಾ ಇನ್ಸ್​ಟಾಗ್ರಾಂ ಧನ್ಯವಾದವನ್ನು ಸಲ್ಲಿಸುವುದಾಗಿ ಹೇಳಿದೆ.

ಇದನ್ನೂ ಓದಿ:ಮತ್ತೊಮ್ಮೆ ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾ ಸರ್ವರ್ ಡೌನ್!

Last Updated : Oct 9, 2021, 10:58 AM IST

ABOUT THE AUTHOR

...view details