ಸ್ಯಾನ್ ಫ್ರಾನ್ಸಿಸ್ಕೋ:ಯುವ ಜನರ ಸೆಳೆಯುತ್ತಿರುವ ಮೂರು ವರ್ಷ ಹಳೆಯ ಕ್ಲಬ್ಹೌಸ್ ಈಗ ಭಾರತದಲ್ಲಿ ಸದ್ದು ಮಾಡ್ತಿದೆ. ಕಳೆದೊಂದು ವರ್ಷದಿಂದ ಭಾರತದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಕ್ಲಬ್ಹೌಸ್ಗೆ ಟಕ್ಕರ್ ಕೊಡಲು ಫೇಸ್ಬುಕ್ ಮುಂದಾಗಿದೆ. ಆಡಿಯೋ ಮೆಸೆಜಿಂಗ್ ಆ್ಯಪ್ ಆಗಿರುವ ಕ್ಲಬ್ಹೌಸ್ ಕಡಿಮೆ ಅವಧಿಯಲ್ಲಿ ಮನೆಮಾತಾಗಿದೆ. ಈ ಹಿನ್ನೆಲೆ ಫೇಸ್ಬುಕ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಹೊರತರಲು ಮುಂದಾಗಿದೆ.
ಫೇಸ್ಬುಕ್ ತನ್ನ ಆ್ಯಪ್ನಲ್ಲಿ ಆಡಿಯೋ ರೂಮ್ ಮತ್ತು ಪಾಡ್ಕಾಸ್ಟ್ ಸೌಲಭ್ಯ ನೀಡಲು ಮುಂದಾಗಿದೆ. ಈಗಾಗಲೇ ಯುಸ್ನಲ್ಲಿ ಆಯ್ದ ಬಳಕೆದಾರರಿಗೆ ಈ ವಿನೂತನ ಸೌಲಭ್ಯ ಲಭ್ಯವಾಗಿದೆ. ಇದಲ್ಲದೇ ತನ್ನದೆ ‘ಸೌಂಡ್ಬೈಟ್’ ಎಂಬ ಆ್ಯಪ್ ಅಭಿವೃದ್ಧಿಪಡಿಸುವ ಕಾರ್ಯಕ್ಕೂ ಫೇಸ್ಬುಕ್ ಮುಂದಾಗಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಹೆಚ್ಚು ಬಳಕೆದಾರರಿಗೆ ಈ ಲೈವ್ ಆಡಿಯೋ ರೂಮ್ ಬಳಕೆಯ ಅವಕಾಶ ನೀಡಲಿದೆಯಂತೆ.