ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಮತ್ತು ರಷ್ಯಾ ಯುದ್ಧ ಸಂಬಂಧ ಫೇಸ್ಬುಕ್ ನೀತಿಗಳಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿಕೊಂಡಿದೆ. ಈ ಮೊದಲು ಪೋಸ್ಟ್ಗಳಲ್ಲಿ ಹಿಂಸಾತ್ಮಕ ಹೇಳಿಕೆಗಳನ್ನು ನೀಡಲು ಫೇಸ್ಬುಕ್ ಸೇರಿದಂತೆ ಮೆಟಾ ಒಡೆತನದ ಪ್ಲಾಟ್ಫಾರ್ಮ್ಗಳು ಅನುಮತಿ ನೀಡುತ್ತಿರಲಿಲ್ಲ. ಆದರೀಗ ಈ ನಿಯಮಗಳಲ್ಲಿ ತಾತ್ಕಾಲಿಕವಾಗಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.
ಹೌದು, ರಷ್ಯಾದ ವಿರುದ್ಧ ಈಗಾಗಲೇ ಬಹುತೇಕ ರಾಷ್ಟ್ರಗಳು ಮತ್ತು ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿರುವಂತೆ, ಮೆಟಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ರಷ್ಯಾ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸಲು ಬಳಕೆದಾರರು 'ರಷ್ಯಾ ಆಕ್ರಮಣಕಾರರ ಸಾವು', 'ಪುಟಿನ್ ಸಾವು' ಮುಂತಾದ ರಷ್ಯಾ ಮಿಲಿಟರಿ ಆಕ್ರಮಣ ವಿರೋಧಿ ಹೇಳಿಕೆ ಅಥವಾ ಪೋಸ್ಟ್ಗಳಿಗೆ ಅನುಮತಿ ನೀಡಲಾಗಿದೆ.