ನವದೆಹಲಿ: ಗೂಗಲ್ ಟಿವಿಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಪ್ರೊಫೈಲ್ ಅನ್ನು ಗೂಗಲ್ ಸೋಮವಾರ ಪ್ರಕಟಿಸಿದೆ. ಯಾವ ಅಪ್ಲಿಕೇಶನ್‌ಗಳು ಮಕ್ಕಳು ವೀಕ್ಷಿಸಲು ಸೂಕ್ತವೆಂದು ಪೋಷಕರು ಆಯ್ಕೆ ಮಾಡಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಮಗುವಿಗಾಗಿ ಪೋಷಕರು ಈಗಾಗಲೇ ಇರುವ ಗೂಗಲ್ ಖಾತೆಯನ್ನೇ ಸೇರಿಸಬಹುದು ಅಥವಾ ಮಗುವಿನ ಹೆಸರು ಮತ್ತು ವಯಸ್ಸಿನೊಂದಿಗೆ ಹೊಸ ಪ್ರೊಫೈಲ್ ರಚಿಸಬಹುದಾಗಿದೆ.
ಮಕ್ಕಳ ಈ ಪ್ರೊಫೈಲ್‌ಗಳು ಕ್ರೋಮ್‌ಕಾಸ್ಟ್ ಮೂಲಕ ಗೂಗಲ್ ಟಿವಿ ಮತ್ತು ಯುಎಸ್‌ನಲ್ಲಿನ ಇತರ ಗೂಗಲ್ ಟಿವಿ ಸಾಧನಗಳೊಂದಿಗೆ ಹೊರಹೊಮ್ಮುತ್ತಿವೆ. ಈ ತಿಂಗಳಿನಿಂದ ಆರಂಭವಾಗಲಿದ್ದು, ಜಾಗತಿಕವಾಗಿ ಮುಂದಿನ ತಿಂಗಳಲ್ಲಿ ಪ್ರಾರಂಭವಾಗಲಿದೆ.
"ಪೋಷಕರು ತಮ್ಮ ಮಗುವಿನ ಪ್ರೊಫೈಲ್‌ಗೆ ಯಾವ ಅಪ್ಲಿಕೇಶನ್‌ಗಳನ್ನು ಸೇರಿಸಬೇಕೆಂದು ಆಯ್ಕೆ ಮಾಡಲು ಇಲ್ಲಿ ಸಾಧ್ಯವಾಗುತ್ತದೆ. ಮಕ್ಕಳ ಪ್ರೊಫೈಲ್ ಮಕ್ಕಳ ಸ್ನೇಹಿ ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ನಿಮ್ಮ ಮಕ್ಕಳು ಏನು ನೋಡಬೇಕೆಂದು ಸುಲಭವಾಗಿ ಕಂಡುಕೊಳ್ಳಬಹುದು" ಎಂದು ಟೆಕ್ ಜೇಂಟ್ ಹೇಳಿಕೆಯಲ್ಲಿ ತಿಳಿಸಿದೆ.