ನವದೆಹಲಿ :ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ಭರವಸೆ ಎಲ್ಲರಲ್ಲಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳನ್ನು ತಯಾರಿಸಲು ಗುಜರಾತ್ನಲ್ಲಿ ನೂತನ ಕಾರ್ಖಾನೆಯನ್ನು ನಿರ್ಮಾಣ ಮಾಡುವುದಾಗಿ ಸುಜುಕಿ ಮೋಟಾರ್ ಕಂಪನಿ ತಿಳಿಸಿದ್ದು, 2026ರ ವೇಳೆಗೆ ವ್ಯಾಪಾರ ನಡೆಸುವ ಗುರಿ ಹೊಂದಿದೆ.
ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳ ಕಾರ್ಖಾನೆಯ ನಿರ್ಮಾಣಕ್ಕಾಗಿ ಸುಜುಕಿ ಸುಮಾರು 104 ಬಿಲಿಯನ್ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಈಗ ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಸುಜುಕಿ ಉತ್ಪಾದನೆ ಮಾಡಿದ ಪ್ರತಿ ಎರಡು ಕಾರುಗಳಲ್ಲಿ ಒಂದು ಕಾರನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.
ಶೇ.50ರಷ್ಟು ಕಾರುಗಳನ್ನು ಭಾರತವೇ ಕೊಂಡುಕೊಳ್ಳುತ್ತಿರುವ ಕಾರಣದಿಂದ ಇಲ್ಲಿಯೇ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಾರ್ಖಾನೆಯನ್ನು ಸ್ಥಾಪನೆ ಮಾಡಲಿದೆ. ಕೇಂದ್ರ ಸರ್ಕಾರವೂ ಡಿಕಾರ್ಬನೈಸೇಶನ್ ಮಾಡುವ ಸಲುವಾಗಿ ಶುದ್ಧ ಇಂಧನ ಬಳಸುವ ವಾಹನಗಳನ್ನು ಉತ್ತೇಜಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನೂ ಉತ್ತೇಜಿಸುತ್ತಿದೆ. ಕೇಂದ್ರ ಸರ್ಕಾರವೂ ನಿಲುವು ಕೂಡ ಸುಜುಕಿ ಮೋಟಾರ್ಗೆ ವರವಾಗಲಿದೆ. ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯು ಎಲೆಕ್ಟ್ರಿಕ್ ವಾಹನಗಳಿಗಾಗಿ ಇನ್ನೂ ಸಿದ್ಧವಾಗಿಲ್ಲ.