ಕರ್ನಾಟಕ

karnataka

ETV Bharat / lifestyle

BS6 ಹೊಂಡಾ ಸಿಟಿ & ಅಮೇಜ್​ ಕಾರು ಖರೀದಿಗೆ 1 ಲಕ್ಷ ರೂ. ಆಫರ್​! - ಅಮೇಜ್​ ಕಾರು

ಕಾರು ಖರೀದಿ ಮಾಡುವ ಗ್ರಾಹಕರಿಗೆ ಇದೀಗ ಹೊಂಡಾ ಭಾರೀ ಆಫರ್​ ನೀಡಿದ್ದು, ಆಯ್ದು ಕಾರುಗಳ ಮೇಲೆ 1 ಲಕ್ಷದವರೆಗೆ ಆಫರ್​ ನೀಡಿದೆ.

BS6 Car Discounts upto rs. 1 lakh
BS6 Car Discounts upto rs. 1 lakh

By

Published : Jun 20, 2020, 10:47 PM IST

ನವದೆಹಲಿ:ದೇಶದಲ್ಲಿ ಈಗಾಗಲೇ ರಿಲೀಸ್​ ಆಗಿರುವ BS6 ಹೊಂಡಾ ಸಿಟಿ ಹಾಗೂ ಅಮೇಜ್​ ಕಾರುಗಳ ಮೇಲೆ 1 ಲಕ್ಷ ರೂ.ವರೆಗೆ ಆಫರ್​ ನೀಡಿ ಕಂಪನಿ ಪ್ರಕಟಣೆ ಹೊರಡಿಸಿದ್ದು, ಜೂನ್​ 30ರವರೆಗೆ ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

ಜಪಾನ್​ ಕಂಪನಿ ಆಯ್ದ ಕಾರುಗಳ ಮೇಲೆ ಈ ಆಫರ್​ ಘೋಷಣೆ ಮಾಡಿದ್ದು, ಕಾರು ಖರೀದಿ ಮಾಡುವ ಗ್ರಾಹಕರಿಗೆ ಅತ್ಯುತ್ತಮ ಆಫರ್​ ನೀಡಿದೆ. ಡಿಸೇಲ್​ ಹಾಗೂ ಪೆಟ್ರೋಲ್​ನಿಂದ ಓಡಿಸಬಹುದಾದ ಈ ಕಾರುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಬಿಎಸ್​​6 ಎಂಜಿನ್​ ಅಮೇಜ್​ ಕಾರಿನ ಬೆಲೆ 6.10 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಟಾಪ್​ ಮಾಡೆಲ್​ ಬೆಲೆ 9.96 ಲಕ್ಷ ರೂ. ಆಗಿದೆ. ಹಳೇ ಕಾರು ವಿನಿಮಯ ಮಾಡಿಕೊಳ್ಳಲು ಬಯಸುವ ಗ್ರಾಹಕರು ರೂ. 20,000ಗಳವರೆಗೆ ನಗದು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ABOUT THE AUTHOR

...view details