ಕೊಯಮತ್ತೂರು: ತಮಿಳುನಾಡಿನ ರಾಮನಾಥಪುರಂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ವಾಟ್ಸ್ಆ್ಯಪ್ ನಂಬರ್ಗೆ ಅಶ್ಲೀಲ ವಿಡಿಯೋ ಕಳುಹಿಸಿದ ಯುವಕನನ್ನು ಬಂಧಿಸಲಾಗಿದೆ.
ಪೊಲೀಸ್ ಕಂಟ್ರೋಲ್ ರೂಂಗೇ ಬೆತ್ತಲೆ ವಿಡಿಯೋ ಕಳುಹಿಸಿದ ಯುವಕನ ಬಂಧನ - Youth sent obscene video to police control room
ತನ್ನದೇ ಬೆತ್ತಲೆ ವಿಡಿಯೋವನ್ನು ಚಿತ್ರೀಕರಿಸಿ ಮತ್ಯಾರಿಗೋ ಕಳುಹಿಸಲು ಹೋಗಿ ತಪ್ಪಾಗಿ ಪೊಲೀಸ್ ಕಂಟ್ರೋಲ್ ರೂಂಗೆ ಕಳುಹಿಸಿದ ಯುವಕನನ್ನು ಬಂಧಿಸಲಾಗಿದೆ.

ಯುವಕನೊಬ್ಬನ ಬೆತ್ತಲೆ ವಿಡಿಯೋವೊಂದನ್ನು ಕಳುಹಿಸಿದ್ದನ್ನು ಕಂಡು ಶಾಕ್ ಆದ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಸರವನಂಪಟ್ಟಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕೊಯಮತ್ತೂರು ಜಿಲ್ಲೆಯ ಚೆರಣ್ಮಾ ನಗರದ ನಿವಾಸಿ ಪ್ರೇಮ್ ಕುಮಾರ್ ಎಂಬ ಯುವಕನೇ ವಿಡಿಯೋ ಕಳುಹಿಸಿದ್ದು ಎಂಬುದು ತಿಳಿದು ಬಂದಿದೆ.
ವಿಚಿತ್ರ ಎಂದರೆ ಪ್ರೇಮ್ ಕುಮಾರ್, ತನ್ನದೇ ಬೆತ್ತಲೆ ವಿಡಿಯೋವನ್ನು ಚಿತ್ರೀಕರಿಸಿ ಮತ್ಯಾರಿಗೋ ಕಳುಹಿಸಲು ಹೋಗಿ ತಪ್ಪಾಗಿ ರಾಮನಾಥಪುರಂ ಪೊಲೀಸ್ ಕಂಟ್ರೋಲ್ ರೂಂಗೆ ಕಳುಹಿಸಿಬಿಟ್ಟಿದ್ದಾನೆ. ಸದ್ಯ ಯುವಕ ಐಟಿ ಕಾಯ್ದೆಯಡಿ ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.