ವಿಜಯಪುರ:ಸಾಲಬಾಧೆ ತಾಳಲಾಗದೆ ಯುವಕನೋರ್ವ ನೇಣಿಗೆ ಶರಣಾದ ಘಟನೆ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ನಡೆದಿದೆ.
ವಿಜಯಪುರ: ಸಾಲಬಾಧೆ ತಾಳದೆ ನೇಣಿಗೆ ಶರಣಾದ ಯುವಕ - ವಿಜಯಪುರದಲ್ಲಿ ಆತ್ಮಹತ್ಯೆ
ಪುಂಡಲೀಕ ಹಂಜಗಿ( 23) ಎಂಬ ಯುವಕ ನೇಣಿಗೆ ಶರಣಾದ ದುರ್ದೈವಿ. ತಾಯಿಗೆ ಮೆದಳು ಸಂಬಂಧಿಂತ ಕ್ಯಾನ್ಸರ್ ಇರುವ ಹಿನ್ನಲ್ಲೆಯಲ್ಲಿ 4 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದ ಜೊತೆಗೆ ಊರಿನ ಸಹಕಾರಿ ಸಂಘದಲ್ಲಿ 55,000 ರೂ. ಸಾಲ ಪಡೆದಿದ್ದ ಎನ್ನಲಾಗುತ್ತಿದೆ.
ನೇಣಿಗೆ ಶರಣಾದ ಯುವಕ
ಪುಂಡಲೀಕ ಹಂಜಗಿ( 23) ಎಂಬ ಯುವಕ ನೇಣಿಗೆ ಶರಣಾದ ಯುವಕ. ತಾಯಿಗೆ ಮೆದಳು ಸಂಬಂಧಿಂತ ಕ್ಯಾನ್ಸರ್ ಇರುವ ಹಿನ್ನಲ್ಲೆಯಲ್ಲಿ 4 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದ. ಇದರ ಜೊತೆಗೆ ಊರಿನ ಸಹಕಾರಿ ಸಂಘದಲ್ಲಿ 55,000 ರೂ. ಸಾಲ ಪಡೆದಿದ್ದ ಎನ್ನಲಾಗುತ್ತಿದೆ.
ತನ್ನ ತಾಯಿಯ ಆರೋಗ್ಯ ಚೇರಿಕೆಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದ್ದು, ಜಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.