ಕೊಳ್ಳೇಗಾಲ:ಮದುವೆ ನಿಶ್ಚಯವಾಗಿದ್ದ ವರ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ವಧುವಿನ ಮನೆಯವರು ವಿವಾಹ ಮುರಿದ ಘಟನೆ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.
ಕಳ್ಳತನದಿಂದ ಮುರಿದು ಬಿದ್ದ ಮದುವೆ: ಹಸಮಣೆ ಏರಬೇಕಾದವ ಜೈಲು ಸೇರಿದ
ಯಳಂದೂರು ಪಟ್ಟಣ ಪಂಚಾಯಿತಿಯ ಆಲ್ಕೆರೆ ಅಗ್ರಹಾರ ಗ್ರಾಮದ ಯುವಕ ರಂಗಸ್ವಾಮಿ (23) ಎಂಬುವವ ಕಂಕಣ ಭಾಗ್ಯ ಕಳೆದುಕೊಂಡವ. ಈತನಿಗೆ ಜುಲೈ 5ರಂದು ತನ್ನೂರಿನ ನಿವಾಸಿ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಇದೀಗ ಈ ಮದುವೆ ಕಾರ್ಯ ಮುರಿದು ಬಿದಿದ್ದೆ.
ಯಳಂದೂರು ಪಟ್ಟಣ ಪಂಚಾಯಿತಿಯ ಆಲ್ಕೆರೆ ಅಗ್ರಹಾರ ಗ್ರಾಮದ ಯುವಕ ರಂಗಸ್ವಾಮಿ (23) ಎಂಬುವವ ಕಂಕಣ ಭಾಗ್ಯ ಕಳೆದುಕೊಂಡವ. ಈತನಿಗೆ ಜುಲೈ 5ರಂದು ತನ್ನೂರಿನ ನಿವಾಸಿ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಇದೀಗ ಈ ಮದುವೆ ಕಾರ್ಯ ಮುರಿದು ಬಿದ್ದಿದೆ.
ರಂಗಸ್ವಾಮಿ ಎಂಬಾತ ಕಳ್ಳನೆಂದು ತಿಳಿಯುತ್ತಿದ್ದಂತೆ ವಧುವಿನ ಕುಟುಂಬದವರು ವಿವಾಹ ಕಾರ್ಯ ಮುರಿದಿದ್ದಾರೆ. ಕೊಳ್ಳೇಗಾಲ ಪಟ್ಟಣದಲ್ಲಿ ಜುಲೈ 23ರ ರಾತ್ರಿ 5 ಮನೆಯಲ್ಲಿ ಸರಣಿ ಕಳ್ಳತನ ನಡೆದಿತ್ತು. ಈ ಪ್ರಕರಣದಲ್ಲಿ ಈತ ಕೂಡ ಪ್ರಮುಖ ಆರೋಪಿ ಆಗಿದ್ದಾನೆ. ಕಳ್ಳತನ ಪ್ರಕರಣದಲ್ಲಿ ಇರುವುದರಿಂದ ನಿಶ್ಚಯವಾಗಿದ್ದ ಮದುವೆ ಮುರಿದಿದ್ದು, ಹಸಮಣೆ ಏರಬೇಕಾದ ರಂಗಸ್ವಾಮಿ ಜೈಲು ಸೇರಿದ್ದಾನೆ.