ಕರ್ನಾಟಕ

karnataka

ETV Bharat / jagte-raho

ಯೋಗೀಶ ಗೌಡ ಕೊಲೆ‌ ಪ್ರಕರಣ: ವಿಜಯ ಕುಲಕರ್ಣಿ ವಿಚಾರಣೆ ನಡೆಸಿದ ಸಿಬಿಐ - ಯೋಗೀಶ ಗೌಡ ಕೊಲೆ‌ ಪ್ರಕರಣದ ಸಿಬಿಐ ತನಿಖೆ

ಯೋಗೀಶ ಗೌಡ ಕೊಲೆ‌ ಪ್ರಕರಣ ನಿನ್ನೆ ವಿಜಯ ಕುಲಕರ್ಣಿ ಅವರನ್ನು ಸಿಬಿಐ ವಿಚಾರಣೆ ನಡೆಸಿತು. ವಿಚಾರಣೆಗೆ ಹಾಜರಾಗಿ ವಿಜಯ ಕುಲಕರ್ಣಿ ವಾಪಸ್ ಆಗಿದ್ದಾರೆ. ಮಾಜಿ ಸಚಿವರ ಸಹೋದರ ವಿಜಯ ಕುಲಕರ್ಣಿ ಅವರನ್ನು ಅರ್ಧ ಗಂಟೆಗೂ ಅಧಿಕ ಕಾಲ ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

vijay kulkarni
ವಿಜಯ ಕುಲಕರ್ಣಿ

By

Published : Sep 27, 2020, 4:55 AM IST

ಧಾರವಾಡ:ಹುಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ ಗೌಡ ಕೊಲೆ‌ ಪ್ರಕರಣದ ಸಿಬಿಐ ತನಿಖೆ ಮುಂದುವರೆದಿದೆ.

ನಿನ್ನೆ ಕೂಡ ವಿಜಯ ಕುಲಕರ್ಣಿ ಅವರನ್ನು ಸಿಬಿಐ ವಿಚಾರಣೆ ನಡೆಸಿತು. ವಿಚಾರಣೆಗೆ ಹಾಜರಾಗಿ ವಿಜಯ ಕುಲಕರ್ಣಿ ವಾಪಸ್ ಆಗಿದ್ದಾರೆ. ಮಾಜಿ ಸಚಿವರ ಸಹೋದರ ವಿಜಯ ಕುಲಕರ್ಣಿ ಅವರನ್ನು ಅರ್ಧ ಗಂಟೆಗೂ ಅಧಿಕ ಕಾಲ ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಸಿಬಿಐ ವಿಚಾರಣೆಗೆ ಹಾಜರಾದ ವಿಜಯ ಕುಲಕರ್ಣಿ

ತಮ್ಮ ಜನ್ಮ ದಿನದಂದೆ ವಿಜಯ ಕುಲಕರ್ಣಿ ಅವರು ಸಿಬಿಐ ವಿಚಾರಣೆ ಎದುರಿಸಿದ್ದಾರೆ. ಈ ಮೊದಲು ಕೆಲ ದಿನಗಳ ಹಿಂದೆ ವಿಜಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿಗೆ ಕರೆಸಿ ವಿಚಾರಣೆ ಮಾಡಿತ್ತು. ಇವರಷ್ಟೇ ಅಲ್ಲದೇ ಇನ್ನೂ ಕೆಲವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details