ಕರ್ನಾಟಕ

karnataka

ETV Bharat / jagte-raho

ಸಿಬಿಐ ವಶಕ್ಕೆ ವಿನಯ್ ಸೋದರ ಮಾವ: ವಿಚಾರಣೆಗಾಗಿ ಧಾರವಾಡಕ್ಕೆ ಕರೆತಂದ ಸಿಬಿಐ - vinay kulkarni cbi enquiry

ಯೋಗೇಶಗೌಡ ಹತ್ಯೆ ಸಂಚು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಹಿನ್ನೆಲೆಯಲ್ಲಿ ಚಂದ್ರಶೇಖರ್ ಇಂಡಿ ಸಿಬಿಐ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಉಪನಗರ ‌ಪೊಲೀಸ್ ಠಾಣೆಯಲ್ಲಿ ಅವರನ್ನು ಇರಿಸಲಾಗಿದ್ದು, ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

Chandrashekhar Indi
ಚಂದ್ರಶೇಖರ್​ ‌ಇಂಡಿ‌

By

Published : Dec 13, 2020, 6:01 AM IST

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್​ ಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧ ಮಾಜಿ‌‌ ಸಚಿವ ವಿನಯ್ ಕುಲಕರ್ಣಿ ಅವರ ಸೋದರ ಮಾವ ಅವರನ್ನು ಸಿಬಿಐ ತನ್ನ ವಶಕ್ಕೆ ಪಡದುಕೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ತಡ ರಾತ್ರಿ ಧಾರವಾಡಕ್ಕೆ ಕರೆತಂದಿದೆ.

ವಿನಯ್ ಸೋದರ ಮಾವ ಚಂದ್ರಶೇಖರ್​ ‌ಇಂಡಿ‌ ಅವರನ್ನು ವಿಜಯಪುರದಲ್ಲಿ‌ ವಶಕ್ಕೆ ಪಡೆದುಕೊಂಡ ಸಿಬಿಐ ಅಧಿಕಾರಿಗಳು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಸಿಬಿಐ ವಶಕ್ಕೆ ವಿನಯ್ ಸೋದರ ಮಾವ

ಯೋಗೇಶ್ ಗೌಡ ಹತ್ಯೆ ಸಂಚು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಹಿನ್ನೆಲೆಯಲ್ಲಿ ಚಂದ್ರಶೇಖರ್ ಇಂಡಿ ಸಿಬಿಐ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಉಪನಗರ ‌ಪೊಲೀಸ್ ಠಾಣೆಯಲ್ಲಿ ಅವರನ್ನು ಇರಿಸಲಾಗಿದ್ದು, ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ವಿನಯ್ ಕುಲಕರ್ಣಿ ಸೋದರ ಮಾವ ಸಿಬಿಐ ವಶಕ್ಕೆ: ಧಾರವಾಡ ಉಪನಗರ ಠಾಣೆ ಬಳಿ ಬಿಗಿ ಭದ್ರತೆ

ABOUT THE AUTHOR

...view details