ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಲ್ಲಿ ಕಪ್ಪು ಬಣ್ಣದ ಕಾರೊಂದು ತೀವ್ರ ಕುತೂಹಲ ಮೂಡಿಸಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣ: ತೀವ್ರ ಕುತೂಹಲ ಮೂಡಿಸಿದ ಕಾರು ತಪಾಸಣೆ
ಧಾರವಾಡ ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಲ್ಲಿ ಕಪ್ಪು ಬಣ್ಣದ ಕಾರೊಂದು ತೀವ್ರ ಕುತೂಹಲ ಮೂಡಿಸಿದೆ.
ಧಾರವಾಡ ನಗರದ ಜರ್ಮನ್ ವೃತ್ತದ ಬಳಿಯ ಪೊಲೀಸ್ ವಸತಿ ಗೃಹದಲ್ಲಿ ವಿಚಾರಣೆ ಮುಂದುವರೆದಿದೆ. ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಆತ್ಮೀಯರೊಬ್ಬರಿಗೆ ಸೇರಿದ ಕಪ್ಪು ಬಣ್ಣದ ಶೆವರ್ಲೆ ಕಂಪನಿಯ ಕಾರಿನ ತಪಾಸಣೆಯನ್ನು ಸಿಬಿಐ ಅಧಿಕಾರಿಗಳು ನಡೆಸಿದರು.
ಮುತ್ತಗಿ ಆತ್ಮೀಯರನ್ನು ವಿಚಾರಣೆ ಮಾಡಿದ ಬಳಿಕ, ಆತನ ಕಾರನ್ನು ಸಹ ಸಿಬಿಐ ಅಧಿಕಾರಿಗಳು ಬಹಳ ಹೊತ್ತು ತಪಾಸಣೆ ನಡೆಸಿದರು. ಈ ವೇಳೆ ಸಾರ್ವಜನಿಕರು ಕುತೂಹಲದಿಂದ ಅತಿಥಿ ಗೃಹದ ಕಾಂಪೌಂಡ್ ಸುತ್ತಲೂ ನಿಂತು ಎಲ್ಲವನ್ನು ವೀಕ್ಷಿಸಿದರು. ಆದರೆ ಕೊಲೆ ಪ್ರಕರಣದಲ್ಲಿ ಈ ಕಾರಿನ ಪಾತ್ರವೇನು? ಎಂಬುದು ಮಾತ್ರ ತೀವ್ರ ಕುತೂಹಲ ಹುಟ್ಟಿಸಿದೆ.