ಅಲ್ವಾರ್ (ರಾಜಸ್ಥಾನ):ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಳೆದ 5 ತಿಂಗಳಿನಿಂದ ಬಾಕಿ ಇದ್ದ ಸಂಬಳ ನೀಡುವಂತೆ ಒತ್ತಾಯಿಸಿದ್ದಕ್ಕೆ ಮಾಲೀಕ ಆತನ ಮೇಲೆ ಮದ್ಯವನ್ನು ಸುರಿದು ಬೆಂಕಿ ಹಚ್ಚಿದ್ದಾನೆ.
5 ತಿಂಗಳ ಬಾಕಿ ಸಂಬಳ ಕೇಳಿದ್ದಕ್ಕೆ ಕೆಲಸಗಾರನನ್ನು ಜೀವಂತವಾಗಿ ಸುಟ್ಟ ಮಾಲೀಕ! - ರಾಜಸ್ಥಾನ ಕ್ರೈಂ ಸುದ್ದಿ
5 ತಿಂಗಳಿನಿಂದ ಬಾಕಿ ಇದ್ದ ಸಂಬಳ ನೀಡುವಂತೆ ಒತ್ತಾಯಿಸಿದ್ದಕ್ಕೆ ಮಾಲೀಕನು ಕೆಲಸಗಾರನ ಮೇಲೆ ಮದ್ಯವನ್ನು ಸುರಿದು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಕೆಲಸಗಾರನನ್ನು ಜೀವಂತವಾಗಿ ಸುಟ್ಟ ಮಾಲೀಕ
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕಮಲೇಶ್ ಎಂಬ ಕೆಲಸಗಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.