ಗೊಡ್ಡಾ (ಜಾರ್ಖಂಡ್): ಜಿಲ್ಲೆಯ ಪೊಡೈಹಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ನವದಿಹಾದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೋಲಿನಿಂದ ಹೊಡೆದು ಕೊಂದಿದ್ದಾಳೆ. ಪತಿ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದು ಮಹಿಳೆ ಸಮರ್ಥನೆ ಬೇರೆ ನೀಡಿದ್ದಾಳೆ.
ಕಳೆದ ಕೆಲವು ದಿನಗಳಿಂದ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಮಾನಸಿಕ ಸ್ಥಿತಿ ಸರಿಯಾಗಿರಲಿಲ್ಲ. ಅವರನ್ನು ಗಣಪಡಿಸಲು ಚಿಕಿತ್ಸೆ ನಡೆಯುತ್ತಿತ್ತು. ಆದರೂ ಪತಿ ಮನೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು ಎಂದು ಪತ್ನಿ ಸುರ್ಜಮಣಿ ಸೊರೆನ್ ಹೇಳಿದ್ದಾಳೆ. ಮೃತ ಪತಿಯನ್ನು ಫಿಲೆಮನ್ ಬಾಸ್ಕಿ ಎಂದು ಗುರುತಿಸಲಾಗಿದೆ.