ಕರ್ನಾಟಕ

karnataka

ETV Bharat / jagte-raho

ಪತಿಯನ್ನು ಹುಡುಕಿಕೊಂಡು ಹೋದ ಪತ್ನಿ... ಕ್ರೂಸರ್​​ ಡಿಕ್ಕಿಯಾಗಿ ಮಹಿಳೆ ಸಾವು - Raichur crime news

ರಾತ್ರಿ 10 ಗಂಟೆಯಾದರೂ ಗಂಡ ಮನೆಗೆ ಬರಲಿಲ್ಲವೆಂದು ಹುಡುಕಿಕೊಂಡು ಬಂದಾಗ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಮೃತಪಟ್ಟಿದ್ದಾರೆ.

Woman Death In Accident in Raichur
ರಾಯಚೂರು ಗ್ರಾಮೀಣ ಠಾಣೆ

By

Published : Jul 23, 2020, 12:19 PM IST

ರಾಯಚೂರು: ಪತಿ ಮನೆಗೆ ಬರಲಿಲ್ಲವೆಂದು ಹುಡುಕಿಕೊಂಡು ಬಂದಾಗ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಯರಮರಸ್ ಸಮೀಪದ ಮುಖ್ಯರಸ್ತೆ ಬಳಿ ಸಂಭವಿಸಿದೆ.

ಶಂಕ್ರಮ್ಮ ಪಾಗುಂಟಪ್ಪ(52) ಮೃತರು. ರಾತ್ರಿ 10 ಗಂಟೆಯಾದರೂ ಪತಿ ಮನೆಗೆ ಬಂದಿರಲಿಲ್ಲ. ಆಗ ಆತನನ್ನು ಹುಡುಕಿಕೊಂಡು ಮುಖ್ಯರಸ್ತೆಗೆ ಪತ್ನಿ ಬಂದಿದ್ದಾಳೆ. ಈ ವೇಳೆ ಶಂಕ್ರಮ್ಮಗೆ ಕ್ರೂಸರ್ ಗುದ್ದಿದೆ.

ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಮಾರ್ಗ ಮಧ್ಯೆಯೇ ಶಂಕ್ರಮ್ಮ ಕೊನೆಯುಸಿರೆಳೆದರು.

ಘಟನೆ ಬಳಿಕ ಕ್ರೂಸರ್​ ಚಾಲಕ ಪರಾರಿಯಾಗಿದ್ದಾನೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details