ಕರ್ನಾಟಕ

karnataka

ETV Bharat / jagte-raho

ಮದುವೆ ಪ್ರಪೋಸಲ್​ ನಿರಾಕರಿಸಿದ ಮಹಿಳಾ ಕಾನ್ಸ್​​ಟೇಬಲ್​ ಮೇಲೆ ಆ್ಯಸಿಡ್​ ದಾಳಿ ನಡೆಸಿ ಎಸ್ಕೇಪ್​!

ಕೃಷ್ಣಜನ್ಮಭೂಮಿ ಮಥುರಾದಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದೆ. ಮಹಿಳಾ ಪೊಲೀಸ್​ ಪೇದೆ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್​ ದಾಳಿ ನಡೆಸಿ ಪರಾರಿಯಾಗಿದ್ದಾನೆ.

ಸಂಗ್ರಹ ಚಿತ್ರ

By

Published : Apr 4, 2019, 6:08 PM IST

Updated : Apr 4, 2019, 7:52 PM IST

ಮಥುರಾ: ಮದುವೆ ಪ್ರಪೋಸಲ್​ ನಿರಾಕರಿಸಿದ್ದಕ್ಕಾಗಿ ಮಹಿಳಾ ಪೊಲೀಸ್​ ಪೇದೆ ಮೇಲೆ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪೇದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ

20 ವರ್ಷದ ಮಹಿಳಾ ಕಾನ್ಸ್​ಟೇಬಲ್​ ನಿನ್ನೆ ಸಂಜೆ 4.30ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಕಳೆದ ಕೆಲ ತಿಂಗಳಿಂದ ಮದುವೆಯಾಗುವಂತೆ ಪೀಡಿಸುತ್ತಿದ್ದನು. ಆದರೆ ಅದಕ್ಕೆ ಮಹಿಳಾ ಪೊಲೀಸ್​ ಪೇದೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ರೋಸಿ ಹೋಗಿದ್ದ ಆತ ಈ ಕೃತ್ಯವೆಸಗಿದ್ದಾನೆ.

ಘಟನೆ ಹಿನ್ನೆಲೆ:
ಕಳೆದ ಕೆಲ ತಿಂಗಳಿಂದ ಪೇದೆಗೆ ಮದುವೆಯಾಗುವಂತೆ ಪೀಡಿಸಿದ್ದನು. ಆದರೆ ಇದಕ್ಕೆ ನಿರಾಕರಣೆ ಮಾಡಿದ್ದ ಅವಳು ಎಂದಿನಂತೆ ನಿನ್ನೆ ಕೂಡ ಕೆಲಸಕ್ಕೆ ಹೋಗಿದ್ದಳು. ಸಂಜೆ ಮನೆಗೆ ವಾಪಸ್​ ಬರುತ್ತಿದ್ದಾಗ ವ್ಯಕ್ತಿ ಆ್ಯಸಿಡ್​ ದಾಳಿ ನಡೆಸಿ ಪರಾರಿಯಾಗಿದ್ದಾನೆ. ತಕ್ಷಣ ಆಕೆಯನ್ನ ಎಸ್​ಎನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಸತೇಂದ್ರ ಅನಿರುದ್ಧ ತಿಳಿಸಿದ್ದಾರೆ. ಈಗಾಗಲೇ ಆರೋಪಿ ವಿರುದ್ಧ ಸೆಕ್ಷನ್​ 326ಎ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

Last Updated : Apr 4, 2019, 7:52 PM IST

ABOUT THE AUTHOR

...view details