ಹೊಸಪೇಟೆ:ಮಹಿಳೆವೋರ್ವಳು ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆತಾಲೂಕಿನ ನಾಗಲಾಪುರ ಕೆರೆ ಬಳಿ ನಡೆದಿದೆ.
ಓದಿ: ಚಿರಂಜೀವಿ... ಕಾರ್ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಮಗು! ವಿಡಿಯೋ
ಹೊಸಪೇಟೆ:ಮಹಿಳೆವೋರ್ವಳು ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆತಾಲೂಕಿನ ನಾಗಲಾಪುರ ಕೆರೆ ಬಳಿ ನಡೆದಿದೆ.
ಓದಿ: ಚಿರಂಜೀವಿ... ಕಾರ್ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಮಗು! ವಿಡಿಯೋ
ನಾಗಲಾಪುರದ ಕಲ್ಪನಾ (23) ಮತ್ತು ಆಕೆಯ ಒಂದೂವರೆ ವರ್ಷದ ಮಗು ಹುಲಗೇಶ ಮೃತರು. ಮೂರು ವರ್ಷಗಳ ಹಿಂದೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬೆಳ್ಳಟ್ಟಿ ಗ್ರಾಮಕ್ಕೆ ಕಲ್ಪನಾ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ನಂತರ ಸಂಸಾರದಲ್ಲಿ ಗಂಡ-ಹೆಂಡತಿ ಜಗಳ ಮಾಡಿಕೊಂಡಿದ್ದು, ದಂಪತಿಗೆ ಹಲವು ಬಾರಿ ಹಿರಿಯರು ಬುದ್ಧಿವಾದ ಹೇಳಿದ್ದರು ಎನ್ನಲಾಗ್ತಿದೆ.
ಒಂದು ವಾರದ ಹಿಂದೆ ಕಲ್ಪನಾ ತವರು ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.