ಜೈಪುರ :ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಗೆ ಔಷಧಿ ಖರೀದಿಸಲು ತೆರಳುತ್ತಿದ್ದಾಗ 30 ವರ್ಷದ ವಿಧವೆಯೊಬ್ಬಳನ್ನು ಅಪಹರಿಸಿದ ದುಷ್ಕರ್ಮಿಗಳು, ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಚುರುವಿನಲ್ಲಿ ನಡೆದಿದೆ.
ವಿಧವೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಪಾಪಿಗಳು!! - ರಾಜಸ್ಥಾನ ಅಪರಾಧ ಸುದ್ದಿ
ಹಾಸಿಗೆ ಹಿಡಿದ ತಂದೆಗೆ ಔಷಧಿ ತರಲು ಹೊರಬಂದಿದ್ದಾಗ, ಅತ್ಯಾಚಾರಿಗಳು ಆಕೆಯನ್ನು ಕಾರಿನಲ್ಲಿ ಬಂದು ಅಪಹರಿಸಿ, ನಂತರ ಕ್ರೂರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಚುರುವಿನ ಮಹಿಳಾ ಪೊಲೀಸ್ ಠಾಣೆ ಎಎಸ್ಐ ಹರಿ ಕಿಶನ್ ಹೇಳಿದ್ದಾರೆ..

ಅತ್ಯಾಚಾರ
ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಇಂದು ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಅಪರಾಧವೆಸಗಿ ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ರತ್ನನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ವರ್ಷಗಳ ಹಿಂದೆ ಮಹಿಳೆ ತನ್ನ ಗಂಡನನ್ನು ಕಳೆದುಕೊಂಡಿದ್ದಾಳೆ. ಆಕೆಗೆ ನಾಲ್ವರು ಮಕ್ಕಳಿದ್ದು, ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಆಕೆಯ ಮೇಲಿದೆ. ಹಾಸಿಗೆ ಹಿಡಿದ ತಂದೆಗೆ ಔಷಧಿ ತರಲು ಹೊರಬಂದಿದ್ದಾಗ, ಅತ್ಯಾಚಾರಿಗಳು ಆಕೆಯನ್ನು ಕಾರಿನಲ್ಲಿ ಬಂದು ಅಪಹರಿಸಿ, ನಂತರ ಕ್ರೂರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಚುರುವಿನ ಮಹಿಳಾ ಪೊಲೀಸ್ ಠಾಣೆ ಎಎಸ್ಐ ಹರಿ ಕಿಶನ್ ಹೇಳಿದ್ದಾರೆ.