ಪಾಟ್ನಾ (ಬಿಹಾರ):ಬಾಲಿವುಡ್ ನಟ ಸುಶಾಂತ್ ಸಾವು ಪ್ರಕರಣದಲ್ಲಿ ಸಾಕ್ಷ್ಯಗಳಿಗೆ ಬೆದರಿಕೆಯೊಡ್ಡುವ ಅಥವಾ ಅವರನ್ನು ಕೊಲ್ಲಬಹುದಾದ ಸಾಧ್ಯತೆ ಇದೆ ಎಂದು ಸುಶಾಂತ್ ಸಂಬಂಧಿ ಹಾಗೂ ಭಾರತೀಯ ಜನತಾ ಪಕ್ಷದ ಶಾಸಕ ನೀರಜ್ ಸಿಂಗ್ ಬಬ್ಲೂ ಆರೋಪಿಸಿದ್ದಾರೆ.
ಸುಶಾಂತ್ ಸಾವಿನ ಸಾಕ್ಷಿಗಳಿಗೆ ಕೊಲೆ ಬೆದರಿಕೆ ಸಾಧ್ಯತೆ: ಬಿಜೆಪಿ ಶಾಸಕನ ಅನುಮಾನ
ಸುಶಾಂತ್ ಸಾವು ಪ್ರಕರಣದಲ್ಲಿ ಸಾಕ್ಷ್ಯಗಳಿಗೆ ಬೆದರಿಕೆಯೊಡ್ಡುವ ಅಥವಾ ಕೊಲ್ಲಬಹುದಾದ ಸಾಧ್ಯತೆ ಇದೆ ಎಂದು ಸುಶಾಂತ್ ಸಂಬಂಧಿ ಹಾಗೂ ಶಾಸಕ ನೀರಜ್ ಸಿಂಗ್ ಬಬ್ಲೂ ಗಂಭೀರ ಆರೋಪ ಮಾಡಿದ್ದಾರೆ.
ಸುಶಾಂತ್ ಸಾವಿನ ತನಿಖೆಯ ಬಗ್ಗೆ ಮಾತನಾಡುವ ವೇಳೆ ಮುಂಬೈ ಪೊಲೀಸರು ಸಾಕ್ಷ್ಯದಾರರಿಗೆ ಸರಿಯಾದ ಭದ್ರತೆ ನೀಡುತ್ತಿಲ್ಲ. ಹೀಗಾಗಿ ಅವರಿಗೆ ಆರೋಪಿಗಳು ಬೆದರಿಕೆಯೊಡ್ಡುವ ಅಥವಾ ಸಾಕ್ಷಿ ಹೇಳಲು ಮುಂದೆ ಬರುವವರನ್ನು ಕೊಲ್ಲುವ ಸಾಧ್ಯತೆ ಇದೆ ಎಂದು ನೀರಜ್ ಸಿಂಗ್ ಬಬ್ಲೂ ಅನುಮಾನ ಪಟ್ಟಿದ್ದಾರೆ. ಸಾಕ್ಷಿ ಹೇಳಲು ಬರುವವರಿಗೆ ಅಗತ್ಯ ಭದ್ರತೆ ನೀಡಬೇಕೆಂದು ಬಬ್ಲೂ ಒತ್ತಾಯಿಸಿದ್ದಾರೆ.
ಈಗಾಗಲೇ ಸಿಬಿಐ ತಂಡ ರಿಯಾ ಚಕ್ರವರ್ತಿ ಹಾಗೂ ಪ್ರಕರಣದೊಂದಿಗೆ ಸಂಪರ್ಕ ಹೊಂದಿರುವ ಇತರರ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದೆ. ಪಾಟ್ನಾದಲ್ಲಿಯೂ ಕೂಡ ಸುಶಾಂತ್ ತಂದೆ ಕೆ.ಕೆ. ಸಿಂಗ್ ಅವರಿಂದ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.