ರಾಮನಗರ:ಮಾಗಡಿ ತಾಲೂಕಿನ ಗಟ್ಟೀಪುರ ಸಮೀಪದ ಅರಳೀಕಟ್ಟೆ ದೊಡ್ಡಿಯಲ್ಲಿ ಕೌಟುಂಬಿಕ ಕಲಹದಿಂದ ಪತ್ನಿಯನ್ನು ಪತಿ ಬರ್ಬರವಾಗಿ ಕೊಲೆಗೈದಿದ್ದಾನೆ.
ಗದ್ದೆಗೆ ಕರೆದೊಯ್ದು ಪತ್ನಿಯ ಕತ್ತು ಕೊಯ್ದ ಪತಿ! - crime news
ಕುಟುಂಬ ಕಲಹದಿಂದ ಹೆಂಡತಿಯನ್ನ ಹತ್ಯೆಗೈದ ಗಂಡ. ಮಾಗಡಿ ತಾಲೂಕಿನ ಗಟ್ಟೀಪುರ ಸಮೀಪದ ಅರಳೀಕಟ್ಟೆ ದೊಡ್ಡಿಯಲ್ಲಿ ಕೊಲೆ. ಪೊಲೀಸರಿಗೆ ಶರಣಾದ ಆರೋಪಿ.
![ಗದ್ದೆಗೆ ಕರೆದೊಯ್ದು ಪತ್ನಿಯ ಕತ್ತು ಕೊಯ್ದ ಪತಿ! wife murdered by husband](https://etvbharatimages.akamaized.net/etvbharat/prod-images/768-512-5736872-thumbnail-3x2-sana.jpg)
ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪತಿ
ಮಾಗಡಿ ತಾಲೂಕಿನ ಸೋಲೂರಿನ ಪಾರ್ವತಿ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಆರೋಪಿ ಸ್ವಾಮಿ ಮಾಗಡಿ ಪೊಲೀಸರಿಗೆ ಶರಣಾಗಿದ್ದಾನೆ.
ದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮುನಿಯಪ್ಪನ ಹಬ್ಬ ಆಚರಿಸಬೇಕು ಎಂದು ತಮ್ಮ ಹುಟ್ಟುರಾದ ಅರಳೀಕಟ್ಟೆ ದೊಡ್ಡಿಗೆ ಹೆಂಡತಿಯನ್ನು ಕರೆತಂದಿದ್ದ. ಸಂಜೆ ತಮ್ಮ ಜಮೀನಿಗೆ ಕರೆದೊಯ್ದು ಹೆಂಡತಿ ತಲೆಗೆ ಮಾರಾಕಾಸ್ತ್ರಗಳಿಂದ ಬಲವಾಗಿ ಹೊಡೆದಿದ್ದಾನೆ. ಬಳಿಕ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.