ಕರ್ನಾಟಕ

karnataka

ETV Bharat / jagte-raho

ಕಿರಿಸೊಸೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡವ ಹಿರಿ ಸೊಸೆ - ಪತ್ನಿ ಕೈಯಿಂದ ಕೊಲೆಯಾದ - ಕಿರಿಯ ಸೊಸೆಯೊಂದಿಗೆ ಅನೈತಿಕ ಸಂಬಂಧ

ಕಿರಿ ಸೊಸೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಹಿರಿಯ ಸೊಸೆ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಭಾದೋಹಿಯಲ್ಲಿ ನಡೆದಿದೆ.

Wife, daughter-in-law kill man over illicit affair
ಅನೈತಿಕ ಸಂಬಂಧಕ್ಕೆ ಕೊಲೆ

By

Published : Dec 14, 2020, 4:32 PM IST

ಭಾದೋಹಿ (ಉತ್ತರ ಪ್ರದೇಶ):ತನ್ನ ಕಿರಿಯ ಸೊಸೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ 55 ವರ್ಷದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಹಿರಿಯ ಸೊಸೆ ಸೇರಿಕೊಂಡು ಕೊಲೆ ಮಾಡಿದ್ದಾರೆ.

ಉತ್ತರ ಪ್ರದೇಶದ ಭಾದೋಹಿಯಲ್ಲಿ ನಿನ್ನೆ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಗೆ ನಾಲ್ವರು ಗಂಡು ಮಕ್ಕಳಿದ್ದು, ಇಬ್ಬರಿಗೆ ವಿವಾಹವಾಗಿದೆ. ಮಕ್ಕಳೆಲ್ಲರೂ ಮುಂಬೈನಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಇಬ್ಬರು ಸೊಸೆಯರು ಅತ್ತೆ - ಮಾವನ ಮನೆಯಲ್ಲಿಯೇ ವಾಸವಾಗಿದ್ದರು. ಆದರೆ, ಮಾವ ತನ್ನ ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡಿದ್ದಾನೆ.

ಇದನ್ನೂ ಓದಿ: ವಿವಾಹ ಪೂರ್ವ ಸಂಬಂಧ ಮದುವೆ ಬಳಿಕವೂ ಕದ್ದುಮುಚ್ಚಿ.. ಗುಟ್ಟು ರಟ್ಟಾದ್ಮೇಲೆ ಕೊನೆ ನಿರ್ಧಾರಕ್ಕೆ ಬಂದ್ಬಿಟ್ಟರು..

ವಿಷಯ ತಿಳಿದ ಪತ್ನಿ ಹಾಗೂ ಹಿರಿಯ ಸೊಸೆ ಕಿರಿಯ ಸೊಸೆಯನ್ನು ಆಕೆಯ ತವರು ಮನೆಗೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ಆ ವ್ಯಕ್ತಿ ಹಿರಿ ಸೊಸೆ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಹೆಂಡತಿ, ಸೊಸೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಕಿರಿಯ ಸೊಸೆಯನ್ನು ಮತ್ತೆ ಕರೆಯಿಸಿಕೊಂಡಿದ್ದಾನೆ. ಭಾನುವಾರ ರಾತ್ರಿ ಮನೆಗೆ ನುಗ್ಗಿದ ಹಿರಿ ಸೊಸೆ, ಪತ್ನಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ತಕ್ಷಣವೇ ಕಿರಿಸೊಸೆ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಲ್ವರು ಗಂಡು ಮಕ್ಕಳಿಗೆ ಮಾಹಿತಿ ನೀಡಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details