ಕರ್ನಾಟಕ

karnataka

ETV Bharat / jagte-raho

ಗೋಡೆ ಕುಸಿದು ತಾಯಿ-ನಾಲ್ವರು ಮಕ್ಕಳ ದುರ್ಮರಣ - ಉತ್ತರ ಪ್ರದೇಶ

ಮನೆಯ ಗೋಡೆ ಕುಸಿದು ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

five killed
ಗೋಡೆ ಕುಸಿದು ತಾಯಿ-ನಾಲ್ವರು ಮಕ್ಕಳ ದುರ್ಮರಣ

By

Published : Jul 17, 2020, 4:02 PM IST

ಲಖನೌ(ಉತ್ತರ ಪ್ರದೇಶ): ಗುರುವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್​ಪುರದ ವಾಜಿದ್ ಖೇಲ್ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಶಬ್ನಮ್ (42), ರೂಬಿ (20) ಶಹಬಾಜ್ (5), ಚಾಂದಿನಿ (3) ಮತ್ತು ಸಾಹಿಬ್ (8) ಮೃತರು. ಘಟನೆಯಲ್ಲಿ ಶಬ್ನಮ್​ರ ಇನ್ನೊಬ್ಬ ಮಗ ಸಾಹಿಲ್ (15) ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶಹಜಹಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ABOUT THE AUTHOR

...view details