ಬೆಂಗಳೂರು :ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರನಿಂದ ಹಲಸೂರು ಠಾಣೆ ಸಂಚಾರಿ ಪೊಲೀಸರು ಬರೋಬ್ಬರಿ 19,300 ರೂ.ದಂಡ ವಸೂಲಿ ಮಾಡಿದ್ದಾರೆ.
83 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರ.. ಕಟ್ಟಿದ ದಂಡ ಬರೋಬ್ಬರಿ ಇಷ್ಟು ₹__ - ವಾಟರ್ ಬಿಸಿನೆಸ್ ಮಾಡುವ ವಿಶ್ವನಾಥ್ ದಂಡ ಕಟ್ಟಿದ್ದ ಬೈಕ್ ಸವಾರ
ಇದನ್ನು ಕಂಡು ಒಂದು ಕ್ಷಣ ಸಂಚಾರಿ ಪೊಲೀಸರೇ ದಂಗಾಗಿದ್ದಾರೆ. ಕೂಡಲೇ ದಂಡ ಪಾವತಿಸುವಂತೆ ತಾಕೀತು ಮಾಡಿದ್ದಾರೆ.

83 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರ, ಪೊಲೀಸರಿಗೆ ಆತ ಕಟ್ಟಿದ ದಂಡವೆಷ್ಟು ಗೊತ್ತಾ...!
ಅಚ್ಚರಿ ಎನಿಸಿದರೂ ಇದು ನಿಜ. ವಾಟರ್ ಬ್ಯುಸಿನೆಸ್ ಮಾಡುವ ವಿಶ್ವನಾಥ್ ಎಂಬ ಬೈಕ್ ಸವಾರನೇ ಇಷ್ಟೊಂದು ದಂಡ ಕಟ್ಟಿದ್ದಾನೆ. ಇಂದು ಹಲಸೂರು ಸಂಚಾರಿ ಪೊಲೀಸರು ಕೈಗೆತ್ತಿಕೊಂಡಿದ್ದ ವಿಶೇಷ ಕಾರ್ಯಾಚರಣೆ ವೇಳೆ ವಿಶ್ವನಾಥ್ ಬೈಕ್ ತಡೆ ಹಿಡಿದು ಪರಿಶೀಲಿಸಿದಾಗ ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ವಾಹನ ಚಾಲನೆ ಸೇರಿ ಬರೋಬ್ಬರಿ 83 ಕೇಸ್ ಇರುವುದನ್ನು ಪತ್ತೆಹಚ್ಚಿದ್ದಾರೆ. ಇದನ್ನು ಕಂಡು ಒಂದು ಕ್ಷಣ ಸಂಚಾರಿ ಪೊಲೀಸರೇ ದಂಗಾಗಿದ್ದಾರೆ. ಕೂಡಲೇ ದಂಡ ಪಾವತಿಸುವಂತೆ ತಾಕೀತು ಮಾಡಿದ್ದಾರೆ. ಬೇರೆ ವಿಧಿಯಿಲ್ಲದೆ ಬೈಕ್ ಸವಾರ ಸ್ಥಳದಲ್ಲೇ 19,300 ರೂಪಾಯಿ ದಂಡ ಪಾವತಿಸಿದ್ದಾನೆ.
Last Updated : Mar 15, 2020, 11:02 PM IST