ಕರ್ನಾಟಕ

karnataka

ETV Bharat / jagte-raho

ವ್ಯಾನ್-ಬೈಕ್ ನಡುವೆ ಅಪಘಾತ: ಓರ್ವ ಸಾವು, ಮತ್ತೋರ್ವನಿಗೆ ಗಾಯ - ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಪಡೀಲ್

ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಕಡಲ ತೀರಗಳಿಗೆ ಭೇಟಿ ನೀಡಿದ್ದರು. ಎಲ್ಲಾ ಕಡೆ ಸುತ್ತಾಡಿ ಮರಳಿ ಊರಿಗೆ ವಾಪಸಾಗುವ ಸಂದರ್ಭ ಪಡೀಲ್ ಸಮೀಪದಲ್ಲಿ ಒಮಿನಿ ಮಾದರಿಯ ವ್ಯಾನ್‌ಗೆ ಸುಮಂತ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.

van bike accident one person dead news mangalore
ವ್ಯಾನ್-ಬೈಕ್ ನಡುವೆ ಅಪಘಾತ

By

Published : Dec 8, 2020, 10:10 PM IST

ಮಂಗಳೂರು:ವ್ಯಾನ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಪಡೀಲ್ ಸಮೀಪ ನಡೆದಿದೆ.

ವ್ಯಾನ್-ಬೈಕ್ ನಡುವೆ ಅಪಘಾತ

ಚಿಕ್ಕಮಗಳೂರು ಮೂಲದ ಸುಮಂತ್ (21) ಮೃತ ಬೈಕ್ ಸವಾರ. ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಹಾಗೂ ಹಾಸನ ಮೂಲದ ಗೆಳೆಯರು ಮೂರು ಬೈಕ್‌ಗಳಲ್ಲಿ ಕರಾವಳಿ ಪ್ರವಾಸ ಕೈಗೊಂಡಿದ್ದರು.

ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಕಡಲ ತೀರಗಳಿಗೆ ಭೇಟಿ ನೀಡಿದ್ದರು. ಎಲ್ಲಾ ಕಡೆ ಸುತ್ತಾಡಿ ಮರಳಿ ಊರಿಗೆ ವಾಪಸಾಗುವ ಸಂದರ್ಭ ಪಡೀಲ್ ಸಮೀಪದಲ್ಲಿ ಒಮಿನಿ ಮಾದರಿಯ ವ್ಯಾನ್‌ಗೆ ಸುಮಂತ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.

ಓದಿ: ಸರ್ಕಾರದ ಚಿತ್ತ ವಿದ್ಯಾಗಮ ಯೋಜನೆಯತ್ತ: ಮತ್ತೆ ಆರಂಭವಾಗಲಿದೆಯಾ ತರಗತಿ?

ಪರಿಣಾಮ ಗಂಭೀರ ಗಾಯಗೊಂಡಿದ್ದ ಆತ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details