ಪ್ರತಾಪ್ಗಢ (ಉತ್ತರ ಪ್ರದೇಶ): ದಲಿತ ಸಮುದಾಯಕ್ಕೆ ಸೇರಿದ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಉತ್ತರಪ್ರದೇಶದ ಪ್ರತಾಪ್ಗಢದಲ್ಲಿ ನಡೆದಿದೆ.
ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಚಂದ್ರಕೇಶ್ ವರ್ಮಾ ಎಂಬ ವ್ಯಕ್ತಿ, ಭಾನುವಾರ ರಾತ್ರಿ ಆಕೆ ಮಲಗಿದ್ದ ವೇಳೆ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾನೆ. ಹುಡುಗಿಯ ಕೂಗು ಕೇಳಿಸಿಕೊಂಡ ನೆರೆಹೊರೆಯವರು ದೌಡಾಯಿಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಪೊಲೀಸರಿಗೊಪ್ಪಿಸಿದ್ದಾರೆ.