ಆಗ್ರಾ(ಉತ್ತರಪ್ರದೇಶ) :ನಕಲಿ ವೆಬ್ಸೈಟ್ಗಳ ಮೂಲಕ ಉದ್ಯೋಗದ ಆಮಿಷವೊಡ್ಡಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಏಳು ಜನರ ತಂಡವನ್ನು ಉತ್ತರಪ್ರದೇಶ ಸೈಬರ್ ಕ್ರೈಂ ಪೊಲೀಸರು ಆಗ್ರಾದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸೋನು ಶರ್ಮಾ, ಸತ್ಯವೀರ್ ಸಿಂಗ್, ವೀರ್ಭನ್ ಸಿಂಗ್, ಲವ್ ಕುಶ್, ಓಂಕಾರ್, ಅಮೋಲ್ ಸಿಂಗ್ ಹಾಗೂ ಧರ್ಮೇಂದ್ರ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಜೊತೆ ಇದ್ದ ಇನ್ನೂ ಮೂವರು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರಿಂದ ಲ್ಯಾಪ್ಟಾಪ್ಗಳು, 14 ಮೊಬೈಲ್ ಫೋನ್ಗಳು, 12 ಸಿಮ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.