ಕರ್ನಾಟಕ

karnataka

ETV Bharat / jagte-raho

ನಕಲಿ SBI ಶಾಖೆ ತೆರೆದ ವಂಚಕರು: ಪೊಲೀಸರ ಮಧ್ಯಪ್ರವೇಶದಿಂದ ತಪ್ಪಿದ ಅನಾಹುತ - ನಕಲಿ ಎಸ್‌ಬಿಐ ಶಾಖೆ

ಮೂವರು ಸೇರಿಕೊಂಡು ನಕಲಿ ಬ್ಯಾಂಕ್ ರಶೀದಿ, ಚಲನ್, ರಬ್ಬರ್ ಅಂಚೆಚೀಟಿ ಹಾಗು ಮತ್ತಿತರ ದಾಖಲೆಗಳನ್ನು ಮುದ್ರಿಸಿದ್ದಾರೆ. ಈ ಕೃತ್ಯಗಳನ್ನು ಗಮನಿಸಿದ ಎಸ್‌ಬಿಐ ವಲಯ ವ್ಯವಸ್ಥಾಪಕರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.

fake branch
fake branch

By

Published : Jul 11, 2020, 3:28 PM IST

ತಮಿಳುನಾಡು:ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ‌ (ಎಸ್‌ಬಿಐ)ದ ನಕಲಿ ಶಾಖೆ ತೆರೆದು, ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಮೂವರು ವಂಚಕರನ್ನು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಪ್ರಧಾನ ಆರೋಪಿ ಕಮಲ್ ಬಾಬು ಕಡಲೂರು ಜಿಲ್ಲೆಯ ಪನ್ರುತಿ ಗ್ರಾಮದವನಾಗಿದ್ದಾನೆ. ದೀರ್ಘಕಾಲದವರೆಗೆ ನಿರುದ್ಯೋಗಿಯಾಗಿದ್ದ ಈತ ಮುದ್ರಣಾಲಯದ ಮಾಲೀಕ ಕುಮಾರ್ ಮತ್ತು ರಬ್ಬರ್ ಸ್ಟಾಂಪ್ ತಯಾರಕ ಮನ್ನಿಕಮ್ ಸಹಾಯದಿಂದ ಈ ಪ್ಲಾನ್ ಮಾಡಿದ್ದ.

ಮೂವರು ಆರೋಪಿಗಳು ಸೇರಿಕೊಂಡು ನಕಲಿ ಬ್ಯಾಂಕ್ ರಶೀದಿಗಳು, ಚಲನ್​​ಗಳು, ರಬ್ಬರ್ ಅಂಚೆಚೀಟಿಗಳು ಮತ್ತು ಇತರ ದಾಖಲೆಗಳನ್ನು ಮುದ್ರಿಸಿದ್ದಾರೆ. ಈ ಕೃತ್ಯಗಳನ್ನು ಗಮನಿಸಿದ ಎಸ್‌ಬಿಐ ವಲಯ ವ್ಯವಸ್ಥಾಪಕರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.

ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಮಯೋಚಿತವಾಗಿ ಕ್ರಮ ಕೈಗೊಂಡ ಕಾರಣ ಯಾವುದೇ ಅಕ್ರಮ ವಹಿವಾಟು ನಡೆದಿಲ್ಲ ಮತ್ತು ಯಾರೂ ಹಣ ಕಳೆದುಕೊಂಡಿಲ್ಲ.

ABOUT THE AUTHOR

...view details