ಕರ್ನಾಟಕ

karnataka

ETV Bharat / jagte-raho

ಆಕಸ್ಮಿಕ ಅಗ್ನಿ ಅವಘಡ: 2 ಆಟೋ, ಹುಲ್ಲಿನ ಬಣವೆ ಬೆಂಕಿಗಾಹುತಿ - ಬೀದರ್​ನಲ್ಲಿ ಆಟೋ ಬೆಂಕಿಗೆ ಆಹುತಿ

ಬೀದರ್​ ಜಿಲ್ಲೆ ಬಸವಕಲ್ಯಾಣದ ಉರ್ಕಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ 2 ಆಟೋ, ಮೇವಿನ ಬಣವೆ ನಾಶವಾಗಿವೆ. ಮಂಠಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

two-auto-burn-due-to-fire-accident-in-bidar
ಆಕಸ್ಮಿಕ ಬೆಂಕಿ ಅವಘಡ

By

Published : Apr 28, 2020, 6:50 PM IST

Updated : Apr 29, 2020, 8:31 PM IST

ಬಸವಕಲ್ಯಾಣ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಎರಡು ಆಟೋ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಉರ್ಕಿ ಗ್ರಾಮದಲ್ಲಿ ನಡೆದಿದೆ.

ಆಕಸ್ಮಿಕ ಬೆಂಕಿ ಅವಘಡ

ಗ್ರಾಮದ ಪ್ರದೀಪ ವಡ್ಡೆ ಎಂಬುವವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಮರದ ನೆರಳಿಗೆ ನಿಲ್ಲಿಸಿದ ಎರಡು ಆಟೋಗಳ ಪೈಕಿ ಒಂದು ಭಾಗಶಃ ಸುಟ್ಟು ಕರಕಲಾಗಿದೆ. ಮತ್ತೊಂದು ಸಂಪೂರ್ಣ ಬೆಂಕಿಗೆ ಸುಟ್ಟು ಹೋಗಿದೆ. ಇದರ ಪಕ್ಕದಲ್ಲೇ ಇದ್ದ ಮೇವಿನ ಬಣವೆ ಕೂಡ ಬೆಂಕಿಗೆ ಆಹುತಿಯಾಗಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಗ್ರಾಮಸ್ಥರ ಸಹಾಯದೊಂದಿಗೆ ಬೆಂಕಿ ನಂದಿಸಿದ್ದಾರೆ. 3 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Apr 29, 2020, 8:31 PM IST

ABOUT THE AUTHOR

...view details