ತುಮಕೂರು:ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ವೊಂದು ರಸ್ತೆ ಬದಿ ನಿಂತಿದ್ದ 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಮೇಲೆ ಹರಿದಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗ್ರಾಮ ದೇವತಾ ವೃತ್ತದಲ್ಲಿ ಘಟನೆ ನಡೆದಿದ್ದು, ಕುಣಿಗಲ್ನಿಂದ ತುಮಕೂರಿನತ್ತ ಖಾಸಗಿ ಬಸ್ ತೆರಳುತ್ತಿತ್ತು. ಹಕೀ ಕಾಂಪ್ಲೆಕ್ಸ್ ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಕ್ಕದಲ್ಲಿಯೇ ನಿಂತಿದ್ದ 15ಕ್ಕೂ ಹೆಚ್ಚು ಬೈಕ್ ಗಳ ಮೇಲೆ ಹರಿದಿದೆ.