ಕರ್ನಾಟಕ

karnataka

ETV Bharat / jagte-raho

ಶಿರಾಡಿಯಲ್ಲಿ ತುಳು ಚಿತ್ರನಟ ರೂಪೇಶ್ ಶೆಟ್ಟಿ ಕಾರು ಅಪಘಾತ - ತುಳು ಭಾಷಾ ಚಿತ್ರನಟ ರೂಪೇಶ್ ಶೆಟ್ಟಿ

ಕಾರು ಗುಂಡ್ಯದಿಂದ ಮುಂದಕ್ಕೆ ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸ್ನೇಹಿತರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Tulu filmmaker Rupesh Shetty car accident news
ತುಳು ಚಿತ್ರನಟ ರೂಪೇಶ್ ಶೆಟ್ಟಿ ಕಾರು ಅಪಘಾತ

By

Published : Jan 13, 2021, 10:43 PM IST

ಶಿರಾಡಿ:ತುಳು ಭಾಷಾ ಚಿತ್ರನಟ ರೂಪೇಶ್ ಶೆಟ್ಟಿ ಕಾರು ಅಪಘಾತಕ್ಕೀಡಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನಲ್ಲಿ ನಡೆದಿದೆ.

ತುಳು ಚಿತ್ರನಟ ರೂಪೇಶ್ ಶೆಟ್ಟಿ

ಇದನ್ನೂ ಓದಿ: ಕಲಾತ್ಮಕವಾಗಿ ಕೆತ್ತಿದ ಆನೆ ದಂತಗಳನ್ನು ಮಾರುತ್ತಿದ್ದ ಆರೋಪಿಗಳ ಬಂಧನ

ರೂಪೇಶ್ ಶೆಟ್ಟಿಯವರ ಟೊಯೋಟಾ ಫಾರ್ಚ್ಯೂನರ್ ಕಾರು ಹಾಗೂ ಎದುರಿನಿಂದ ಬರುತ್ತಿದ್ದ ಕಾರೊಂದರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರ್ಯಕ್ರಮ ನಿಮಿತ್ತ ಗೆಳೆಯರ ಜೊತೆ ರೂಪೇಶ್ ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾರು ಗುಂಡ್ಯದಿಂದ ಮುಂದಕ್ಕೆ ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ಸ್ನೇಹಿತರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ನಜ್ಜುಗುಜ್ಜಾದ ಕಾರುಗಳು

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಗಾಯಾಳು ರೂಪೇಶ್ ಶೆಟ್ಟಿ ದಾಖಲಾಗಿದ್ದು, ಸದ್ಯದಲ್ಲೇ ಮನೆಗೆ ಮರಳಲಿದ್ದಾರೆ.

ABOUT THE AUTHOR

...view details