ಹೌದು, ಛತ್ತಿಸ್ಗಡ್ನ ಸುಕ್ಮಾ ಜಲ್ಲೆಯ ಕಾಮರಾಜುಪಾಡು ಗ್ರಾಮದಿಂದ ಹನ್ನೊಂದು ಜನ ಮಹಿಳೆಯರು ಕೂಲಿಗಾಗಿ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಚಿಂತೂರು ತಾಲೂಕಿಗೆ ಬಂದಿದ್ದರು. ದಿನವಿಡೀ ಕೆಲಸ ಮಾಡುವ ಮಹಿಳೆಯರು ಟೀ ಕುಡಿಯಲು ರಸ್ತೆ ಬದಿಯಲ್ಲಿರುವ ಶೆಡ್ ಹೋಟೆಲ್ಗೆ ತೆರಳುತ್ತಿದ್ದರು. ಪ್ರತಿದಿನದಂತೆ ಇಂದು ಸಹ ನಾಲ್ವರು ಮಹಿಳೆಯರು ಹೋಟೆಲ್ಗೆ ತೆರಳಿ ಟೀ ಕುಡಿಯುತ್ತಾ ಟಿವಿ ನೋಡುತ್ತಿದ್ದಾಗ ದುರಂತ ಸಂಭವಿಸಿದೆ.
ಶೆಡ್ ಹೋಟೆಲ್ಗೆ ನುಗ್ಗಿದ ಟ್ರಕ್... ಯಮಸ್ವರೂಪಿ ಲಾರಿಗೆ ನಾಲ್ವರು ಮಹಿಳೆಯರು ಬಲಿ - ಹರಿದ ವಾಹನ
ಅವರೆಲ್ಲ ಮತ್ತೊಂದು ರಾಜ್ಯದಿಂದ ಕೂಲಿಗಾಗಿ ಬಂದ ಮಹಿಳೆಯರು. ದಿನವಿಡೀ ಕೆಲಸ ಮಾಡಿ ಟೀಗಾಗಿ ಪಕ್ಕದ ಹೋಟೆಲ್ಗೆ ತೆರಳಿದ್ದರು. ಆದ್ರೆ ಯಮಸ್ವರೂಪಿ ಟ್ರಕ್ವೊಂದು ಅವರ ಜೀವವನ್ನೇ ಬಲಿ ಪಡೆದಿದೆ.
ಛತ್ತಿಸ್ಗಡ್ನಿಂದ ಭದ್ರಾಚಲಂ ಕಡೆ ತೆರಳುತ್ತಿದ್ದ ಟ್ರಕ್ವೊಂದು ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ನೇರ ಹೋಟೆಲ್ಗೆ ನುಗ್ಗಿದೆ. ಟಿವಿ ನೋಡುತ್ತಾ ಟೀ ಕುಡಿಯುತ್ತಿದ್ದ ಮಹಿಳೆಯರ ಮೇಲೆ ಟ್ರಕ್ ಹರಿದು ಪಲ್ಟಿಯಾಗಿದೆ. ಟ್ರಕ್ ನುಗ್ಗಿದ ರಭಸಕ್ಕೆ ಆ ಜಾಗದಲ್ಲಿದ್ದ ಶೆಡ್ ಹೋಟೆಲ್ ಸಹ ನೆಲಸಮವಾಗಿದೆ. ಈ ಅಪಘಾತದಲ್ಲಿ ಸೋಯಂ ಕಮಲ (20), ಸೋಯಂ ಜೋಗಿ (35), ಚುಕ್ಕಮ್ಮ (22) ಎಂಬ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ ಡ್ರೈವರ್, ಕ್ಲೀನರ್ ಮತ್ತು ಸುಬ್ಬಮ್ಮ (30) ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಸುಬ್ಬಮ್ಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಚಿಂತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.