ಕರ್ನಾಟಕ

karnataka

ETV Bharat / jagte-raho

ಪ್ರತಿಭಟಿಸಲು ದೆಹಲಿಗೆ ತೆರಳುತ್ತಿದ್ದ ವೇಳೆ ಅಪಘಾತ: ರೈತ ಸಾವು - ಹರಿಯಾಣದ ಭಿವಾನಿಯಲ್ಲಿ ನಡೆದ ಅಪಘಾತದಲ್ಲಿ ರೈತ ಸಾವು

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು ದೆಹಲಿಗೆ ತೆರಳುತ್ತಿದ್ದ ಪಂಜಾಬ್‌ನ ರೈತನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

Farmer going towards Delhi dies in Bhiwani
ಪ್ರತಿಭಟಿಸಲು ದೆಹಲಿಗೆ ತೆರಳುತ್ತಿದ್ದ ವೇಳೆ ಅಪಘಾತ

By

Published : Nov 27, 2020, 1:00 PM IST

ಭಿವಾನಿ (ಹರಿಯಾಣ): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಹೊರಟ ರೈತರನ್ನು ದೆಹಲಿಗೆ ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ಟ್ರಕ್​ಗೆ ಡಿಕ್ಕಿ ಹೊಡೆದಿದ್ದು, ರೈತನೊಬ್ಬ ಮೃತಪಟ್ಟಿದ್ದಾನೆ.

ಪಂಜಾಬ್‌ನ ತನ್ನಾ ಸಿಂಗ್ ಮೃತ ರೈತ. ಹರಿಯಾಣದ ಭಿವಾನಿ ಬಳಿ ಘಟನೆ ನಡೆದಿದ್ದು, ಮೃತದೇಹವನ್ನು ರಸ್ತೆ ಮೇಲೆ ಇಟ್ಟುಕೊಂಡು ಉಳಿದ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details