ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಸ್ನೇಹಿತ ಲವ್ ಮಾಡುತ್ತಿರುವುದಾಗಿ ಅರಿತು ಸಹಚರರ ನೆರವಿನಿಂದ ಆತನನ್ನು ಅಪಹರಿಸಿ ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಲೋಕೇಶ್ ಬಂಧಿತ ಆರೋಪಿಯಾಗಿದ್ದು, ರವಿಕುಮಾರ್ ಮೃತಪಟ್ಟ ದುದೈರ್ವಿ. ಲೊಕೇಶ್ ಹಾಗೂ ರವಿಕುಮಾರ್ ಇಬ್ಬರೂ ಸ್ನೇಹಿತರಾಗಿದ್ದರು. ಮಹದೇವಪುರದಲ್ಲಿರುವ ಆಕ್ಸೆಂಚರ್ ಕಂಪನಿಯಲ್ಲಿ ಟೆಂಪೋ ಟ್ರಾವೆಲರ್ (ಟಿಟಿ) ವಾಹನವನ್ನು ಅಟ್ಯಾಚ್ ಮಾಡಿಕೊಂಡು ಚಾಲಕನಾಗಿ ರವಿಕುಮಾರ್ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಬಳಿಕ ಲೊಕೇಶ್ ರವಿಕುಮಾರ್ನೊಂದಿಗೆ ಸೇರಿಕೊಂಡಿದ್ದಾನೆ.
ಈ ವೇಳೆ ರವಿಕುಮಾರ್ ಮುಖಾಂತರ ಲೊಕೇಶ್ಗೆ ಹುಡುಗಿಯ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಕ್ರಮೇಣ ಪ್ರೀತಿಗೆ ತಿರುಗಿದೆ. ರವಿಕುಮಾರ್ ಕೂಡ ಅದೇ ಹುಡುಗಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಇನ್ನೊಂದೆಡೆ ಲೊಕೇಶ್ಗೆ ಗೊತ್ತಾಗದಂತೆ ರವಿಕುಮಾರ್ನೊಂದಿಗೂ ಯುವತಿ ಸ್ನೇಹ ಬೆಳೆಸಿಕೊಂಡಿದ್ದಳು. ಹೀಗಿರಬೇಕಾದರೆ ಚಿಕ್ಕಮಗಳೂರಿಗೆ ಲೊಕೇಶ್ ಹಾಗೂ ಯುವತಿ ಇಬ್ಬರೂ ಹೋಗಿರುವ ವಿಚಾರ ರವಿಕುಮಾರ್ಗೆ ಗೊತ್ತಾಗಿದೆ. ಇದೇ ವಿಚಾರಕ್ಕಾಗಿ ಇಬ್ಬರು ಜಗಳವಾಡಿಕೊಂಡಿದ್ದಾರೆ.