ಕರ್ನಾಟಕ

karnataka

ETV Bharat / jagte-raho

ಕಷ್ಟಪಟ್ಟು ಮನೆ ಕಟ್ಟಿಸಿದ... ಗೃಹ ಪ್ರವೇಶದ ಮುನ್ನವೇ ಚಿಕ್ಕಪ್ಪ, ಮಗ ಸಾವು... ವಿಧಿಯಾಟ ಬಲ್ಲವರ‍್ಯಾರು! - ಬಲ್ಲವರ‍್ಯಾರು

ಆತ ಎಷ್ಟೋ ಆಸೆ ಪಟ್ಟು ಮನೆ ಕಟ್ಟಿಸಿದ. ಗೃಹ ಪ್ರವೇಶಕ್ಕೆಂದು ಸಂಬಂಧಿಕರೂ ಮನೆಗೆ ಬಂದರು. ಮನೆ ಹಬ್ಬದ ವಾತಾವರಣದಿಂದ ಕೂಡಿತ್ತು. ಆದ್ರೆ ಆ ಕುಟುಂಬದಲ್ಲಿ ವಿಧಿಯಾಟಕ್ಕೆ ಇಬ್ಬರು ಬಲಿಯಾಗಿದ್ದು, ಈಗ ಬರೀ ಮೌನ ಆವರಿಸಿದೆ.

ಕಷ್ಟಪಟ್ಟು ಮನೆ

By

Published : Apr 27, 2019, 5:01 PM IST

ಹೈದರಾಬಾದ್​:ಕಷ್ಟಪಟ್ಟು ಬೆವರು ಸುರಿಸಿ ದುಡಿದ ಹಣದಿಂದ ಸ್ವಂತ ಮನೆ ಕಟ್ಟಿದ. ಆದರೆ ಗೃಹ ಪ್ರವೇಶದಂದೇ ಆತ ಹೆಣವಾದ. ಆತನ ಬಾಳಿನಲ್ಲಿ ವಿಧಿ ಒಂದು ಆಟವಾಡಿತು.

ನಿರ್ಮಲ್​ ಪಟ್ಟಣದ ದ್ಯಾಗವಾಡ ಕಾಲೋನಿ ನಿವಾಸಿ ಹರೀಶ್​​​ ಕುಮಾರ್​ (38) ಮತ್ತು ಸೌಜನ್ಯ ದಂಪತಿಗೆ ಇಬ್ಬರು ಮಕ್ಕಳು. ಹರೀಶ್​​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಹೈದರಾಬಾದ್​ನ ಚಿಂತಲ್​ನಲ್ಲಿ ವಾಸಿಸುತ್ತಿದ್ದಾರೆ. ಹರೀಶ್​ ಇಲ್ಲಿನ ಕೆವಿ ರೆಡ್ಡಿನಗರದಲ್ಲಿ ಮನೆಯೊಂದನ್ನು ಕಟ್ಟಿಸಿದ್ದಾರೆ. ಇದೇ ತಿಂಗಳು 29 ಸೋಮವಾರದಂದು ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಹರೀಶ್​​​ ಕುಮಾರ್

ಇನ್ನು ಗೃಹ ಪ್ರವೇಶಕ್ಕೆ ಹಿರಿಯ ಸಹೋದರ ಚಂದ್ರಶೇಖರ್​ ಕುಟಂಬ ಬಂದಿದೆ. ಹೊಸ ಮನೆ ಕೆಲಸ ನೋಡಲು ಹರೀಶ್​ ತನ್ನ ಸಹೋದರನ ಮಗ ಸಿದ್ಧಾರ್ಥ್ (14)​ ಜೊತೆ ಬೈಕ್​ ಮೇಲೆ ತೆರಳಿದ್ದಾರೆ. ಎದುರುಗಡೆಯಿಂದ ಬಂದ ಲಾರಿ ಇವರನ್ನು ಡಿಕ್ಕಿ ಹೊಡೆದಿದೆ. ಹರೀಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಸಿದ್ಧಾರ್ಥ್​ನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಗೃಹ ಪ್ರವೇಶ ಇರುವುದರಿಂದ ಸಂತೋಷದಿಂದ ಕೂಡಿದ ಮನೆಯಲ್ಲಿ ಈಗ ಮೌನ ಆವರಿಸಿದೆ. ಕಿರಿಯ ಸಹೋದರ ಮತ್ತು ಮಗ ಸಿದ್ಧಾರ್ಥ್​ನನ್ನು ಕಳೆದುಕೊಂಡ ಚಂದ್ರಶೇಖರ್​ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಈ ಘಟನೆ ಕುರಿತು ಷೆಟ್​ಬಷಿರಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details