ಕರ್ನಾಟಕ

karnataka

ETV Bharat / jagte-raho

ಮುದ್ದೇಬಿಹಾಳ: ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದು,‌ ಚಾಲಕ ದುರ್ಮರಣ - The driver's death

ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಟ್ರ್ಯಾಕ್ಟರ್‌ ಉರುಳಿ ಬಿದ್ದ ಪರಿಣಾಮ ಚಾಲಕ ನೀರಿನಲ್ಲೇ ಸಾವನ್ನಪ್ಪಿದ ಘಟನೆ ಮುದ್ದೇಬಿಹಾಳ ತಾಲೂಕಿನ ಚೊಂಡಿ ಕ್ರಾಸ್ ಬಳಿ ನಡೆದಿದೆ.

driver death
ಮೃತದೇಹ

By

Published : Aug 18, 2020, 4:35 PM IST

ಮುದ್ದೇಬಿಹಾಳ:ತಾಲೂಕಿನ ಚೊಂಡಿ ಕ್ರಾಸ್ ಬಳಿಯಿರುವ ಕಾಲುವೆಗೆ ಟ್ರ್ಯಾಕ್ಟರ್‌ ಉರುಳಿ ಬಿದ್ದು ಚಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ಮಡಿಕೇಶ್ವರ ತಾಂಡಾದ ಪ್ರವೀಣ ವಾಲು ರಾಠೋಡ (18) ಮೃತ ಚಾಲಕ. ಈತ ಚೊಂಡಿ ಗ್ರಾಮ ಸೀಮೆಯಲ್ಲಿರುವ ತಮ್ಮ ಜಮೀನಿಗೆ ಕೆಲಸಕ್ಕೆಂದು ಕಾಲುವೆ ಪಕ್ಕದ ರಸ್ತೆಯ ಮೂಲಕ‌ ತೆರಳುವಾಗ ನಿಯಂತ್ರಣ ತಪ್ಪಿ‌ ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ.

ಚಾಲಕ ದುರ್ಮರಣ

ಸಿಪಿಐ ಆನಂದ ವಾಘಮೋಡೆ, ತಾಳಿಕೋಟಿ ಪಿಎಸೈ ಶಿವಾಜಿ ಪವಾರ, ಸಿಬ್ಬಂದಿ ರವಿ ಲಮಾಣಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಕಾಲುವೆಯಿಂದ ಮೇಲೆತ್ತಲಾಯಿತು.

ಪರಿಶೀಲನೆ ನಡೆಸಿದ ಪೊಲೀಸರು

ABOUT THE AUTHOR

...view details