ಕರ್ನಾಟಕ

karnataka

ETV Bharat / jagte-raho

ಹಿಮ್ಮುಖವಾಗಿ ಚಲಿಸಿದ ಟ್ರ್ಯಾಕ್ಟರ್​​... ಹಾರಿಹೋಯ್ತು ಕಾರ್ಮಿಕನ ಪ್ರಾಣಪಕ್ಷಿ - ತಾಲೂಕಿನ ಪ್ರತಾಪೂರ ಗ್ರಾಮದಲ್ಲಿಯ ಹೆಂಡತಿ ತವರು ಮನೆ

ಹಿಮ್ಮುಖವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದ ಪರಿಣಾಮ ಕಾರ್ಮಿಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ನಡೆದಿದೆ.

KN_BDR_25_2_Tractor_Accident_Worker_Death_KAC10003
ಹಿಮ್ಮುಖವಾಗಿ ಚಲಿಸುತಿದ್ದ ಟ್ಯಾಕ್ಟ್ರರ್ ಡಿಕ್ಕಿ, ಕಾರ್ಮಿಕ ಸಾವು

By

Published : Feb 25, 2020, 9:18 PM IST

Updated : Feb 25, 2020, 11:39 PM IST

ಬಸವಕಲ್ಯಾಣ:ಹಿಮ್ಮುಖವಾಗಿ ಚಲಿಸುತಿದ್ದ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದು ಕಾರ್ಮಿಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ಗುರುವಾಡಿ ಗ್ರಾಮದ ಶೇಷರಾವ್​ ಗಣಪತಿ ಗಾಯಕವಾಡ (35) ಮೃತ ವ್ಯಕ್ತಿ. ಕೆಲ ವರ್ಷಗಳಿಂದ ತಾಲೂಕಿನ ಪ್ರತಾಪೂರ ಗ್ರಾಮದಲ್ಲಿಯ ಹೆಂಡತಿ ತವರು ಮನೆಯಲ್ಲಿ ನೆಲೆಸಿದ್ದ. ಕೆಲಸಕ್ಕೆ ತೆರಳಿದ್ದ ವೇಳೆ ಶೇಷರಾವ್​ ಟ್ರ್ಯಾಕ್ಟರ್​ ಹಿಂದೆ ನಿಂತು ಮಣ್ಣು ತುಂಬುವಾಗ ಆಕಸ್ಮಿಕವಾಗಿ ಅದು ಹಿಮ್ಮುಖವಾಗಿ ಚಲಿಸಿದ್ದರಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಮಹೇಶಗೌಡ ಪಾಟೀಲ್​, ಪಿಎಸ್‌ಐ ಅರುಣಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Last Updated : Feb 25, 2020, 11:39 PM IST

ABOUT THE AUTHOR

...view details