ಕರ್ನಾಟಕ

karnataka

ETV Bharat / jagte-raho

ಹೊನ್ನಾವರ ಕಡಲತೀರದ ಬಳಿ 3 ಮಹಿಳೆಯರ ಶವ ಪತ್ತೆ..! ಆತ್ಮಹತ್ಯೆ ಶಂಕೆ - ಕಡಲತೀರ

ಕಾರವಾರದ ಕಡತೀರದ ಬಳಿ ಒಂದೇ ಕಡೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಇವರೆಲ್ಲ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೂವರ ಮೃತದೇಹ ಪತ್ತೆ

By

Published : May 13, 2019, 12:25 PM IST

ಕಾರವಾರ: ಹೊನ್ನಾವರ ತಾಲೂಕಿನ ಕೊಪ್ಪದಮಕ್ಕಿ ಕಡಲತೀರದಲ್ಲಿ ಇಂದು ಅಪರಿಚಿತ ಮೂವರು ಮಹಿಳೆಯರ ಶವಗಳು ಪತ್ತೆಯಾಗಿವೆ.

ಆದರೆ, ಮೃತರ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಕೊಪ್ಪದಮಕ್ಕಿ ಕಡಲತೀರದ ಬಳಿ ಒಂದೇ ಕಡೆ ಇಬ್ಬರ ಹಾಗೂ ಸ್ವಲ್ಪ ದೂರದಲ್ಲಿ ಇನ್ನೊಂದು ಮಹಿಳೆಯ ಶವ ಪತ್ತೆಯಾಗಿತ್ತು. ಇದನ್ನು ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮೂವರು ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದು, ತಾಯಿ ಮಕ್ಕಳು ಇರಬಹುದು. ಮಹಿಳೆಗೆ 32 ವರ್ಷ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ 8 ಮತ್ತು 10 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಇವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೂವರ ಶವವನ್ನು ಸರ್ಕಾರಿ ಪ್ರಾಥಮಿಕ ಕೇಂದ್ರದ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details